ಮಂಗಳೂರು/ಉಡುಪಿ: ಸೆ.8 (DaijiworldNews/TA):ಕರಾವಳಿ ಜಿಲ್ಲೆಗಳಾದ ಮಂಗಳೂರು ಮತ್ತು ಉಡುಪಿಯಾದ್ಯಂತ ಇರುವ ಚರ್ಚ್ಗಳಲ್ಲಿ ಮೊಂತಿ ಹಬ್ಬ ಎಂದು ಕರೆಯಲ್ಪಡುವ ಕ್ರೈಸ್ತ ಧರ್ಮೀಯರ ಮಾತೆಯ ಹಬ್ಬವನ್ನು ಭಾನುವಾರದಂದು ಸಂಭ್ರಮ ಮತ್ತು ಭಕ್ತಿಯಿಂದ ಆಚರಿಸಲಾಯಿತು.





























ಮೇರಿ ಮಾತೆಯ ಜನ್ಮವನ್ನು ಸ್ಮರಿಸುವ ಹಬ್ಬವು ಒಂಬತ್ತು ದಿನಗಳ ವಿಶೇಷ ಹಬ್ಬವಾಗಿದೆ. ಮತ್ತು ಕ್ಯಾಥೊಲಿಕ್ ಧರ್ಮೀಯರ ಸುಗ್ಗಿಯ ಹಬ್ಬವಾಗಿ ಸಾಂಸ್ಕೃತಿಕ ಮಹತ್ವವನ್ನು ಪಡೆದಿದೆ. ಸ್ಥಳೀಯವಾಗಿ ಬೆಳೆದ ತರಕಾರಿಗಳಿಂದ ತಯಾರಿಸಲಾದ ವಿಶೇಷ ಸಸ್ಯಾಹಾರಿ ಭಕ್ಷಣ ಹಬ್ಬದ ಭೋಜನದ ಭಾಗವಾಗಿತ್ತು.
ಮತ್ತು ಹೊಸದಾಗಿ ಕೊಯ್ಲು ಮಾಡಿದ ಅಕ್ಕಿಯನ್ನು ಸಾಂಕೇತಿಕವಾಗಿ ಆಶೀರ್ವದಿಸಿ ಚರ್ಚ್ಗಳಲ್ಲಿ ವಿತರಿಸಲಾಯಿತು. ಮೊಂತಿ ಹಬ್ಬವನ್ನು ಅವಳಿ ಜಿಲ್ಲೆಗಳಲ್ಲಿ ಕ್ಯಾಥೋಲಿಕರು ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನರು ಭಕ್ತಿ ಮತ್ತು ಗೌರವದಿಂದ ಆಚರಿಸುತ್ತಾರೆ.