ವಿಟ್ಲ, ಸೆ.8(DaijiworldNews/AK):ವಿಟ್ಲ ಶೋಕ ಮಾತೆ ಇಗರ್ಜಿಯಲ್ಲಿ ಸಂತ ಮೇರಿ ಜನ್ಮದಿನ ತೆನೆಹಬ್ಬ ಆಚರಿಸಲಾಯಿತು. ಬಲಿ ಪೂಜೆ ನೆರವೇರಿಸಿದ ಧರ್ಮ ಗುರು ಫಾ. ಐವನ್ ಮೈಕೆಲ್ ರೋಡ್ರಿಗಸ್ ಹೊಸ ಅಕ್ಕಿಯ ಅನ್ನ ಊಟ ಮಾಡುವ ನಿಮಗೆಲ್ಲ ಶುಭವಾಗಲಿ ಎಂದು ಹರಸಿದರು.


ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ವಿಜಯ್ ಪಾಯಿಸ್, ಕಾರ್ಯದರ್ಶಿ ತೋಮಸ್ ಮಸ್ಕರೇನಸ್, ಆಯೋಗಗಳ ಸಂಯೋಜಕ ಲೂವಿಸ್ ಮಸ್ಕರೇನಸ್, ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.