ಉಡುಪಿ,ಸೆ.9(DaijiworldNews/AK): ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ 13 ವರ್ಷದ ಆರ್ಯ ಎಂಬ ವಿದ್ಯಾರ್ಥಿಯನ್ನು ಕೋಚಿಂಗ್ ಇನ್ಸ್ಟಿಟ್ಯೂಟ್ಗೆ ಡ್ರಾಪ್ ಮಾಡಿ ಬಳಿಕ ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

8 ನೇ ತರಗತಿಯ ವಿದ್ಯಾರ್ಥಿ ಆರ್ಯನನ್ನು ಆತನ ತಂದೆ ಪ್ರಕಾಶ್ ಶೆಟ್ಟಿ ಅವರು ಸೆಪ್ಟೆಂಬರ್ 8 ರ ಭಾನುವಾರ ಬೆಳಿಗ್ಗೆ ಇನ್ಸ್ಟಿಟ್ಯೂಟ್ಗೆ ಡ್ರಾಪ್ ಮಾಡಿದ್ದಾರೆ, ಬಳಿಕ ತಂದೆ 2:45 ರ ಸುಮಾರಿಗೆ ಅವನನ್ನು ಕರೆದುಕೊಂಡು ಹೋಗಲು ಹಿಂದಿರುಗಿದಾಗ, ಆರ್ಯ ಎಲ್ಲಿಯೂ ಕಾಣಲಿಲ್ಲ. . ಸಿಬ್ಬಂದಿಯನ್ನು ವಿಚಾರಿಸಿದಾಗ, ಆರ್ಯ ಆ ದಿನ ಕೋಚಿಂಗ್ ಸೆಷನ್ಗೆ ಹಾಜರಾಗಿರಲಿಲ್ಲ ಎಂದು ಅವರು ತಿಳಿಸಿದರು.
ಈ ಸಂಬಂಧ ಮನೆಯವರು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಆರ್ಯ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ನೀಡುವಂತೆ ಸಾರ್ವಜನಿಕರನ್ನು ಕೋರಲಾಗಿದೆ.