ಕಾಸರಗೋಡು, ಸೆ.9(DaijiworldNews/AA): ಓಣಂ ಹಬ್ಬದ ಹಿನ್ನಲೆಯಲ್ಲಿ ಗ್ರಾಹಕರಿಂದ ದುಬಾರಿ ದರ ವಸೂಲಿ ತಡೆಗೆ ಅಂಗಡಿ ಮಳಿಗೆಗಳಿಗೆ ಅಳತೆಮಾಪಕ ಇಲಾಖೆಯ ಎರಡು ವಿಶೇಷ ತಂಡಗಳು ತಪಾಸಣೆ ನಡೆಸಿದ್ದು, ಸೆ.14ರ ವರೆಗೆ ತಪಾಸಣೆ ಮುಂದುವರಿಯಲಿದೆ.

ಗ್ರಾಹಕರಿಂದ ದುಬಾರಿ ಹಣ ವಸೂಲು ತಡೆಗೆ ಹಾಗೂ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ಖಾತರಿ ಪಡಿಸುವ ನಿಟ್ಟಿನಲ್ಲಿ ತಪಾಸಣೆಗೆ ಮುಂದಾಗಿದೆ. ಸೋಮವಾರ ವಸ್ತ್ರದ ಮಳಿಗೆ ತಪಾಸಣೆ ನಡೆಸಿದ್ದು, ಮೂರು ಮಳಿಗೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮಂಗಳವಾರದಿಂದ ಎಲ್ಲಾ ಮಳಿಗೆಗಳ ತಪಾಸಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.