ಕಡಬ, ಸೆ.9(DaijiworldNews/AA): ಕುಕ್ಕೆ ಸುಬ್ರಮಣ್ಯದಿಂದ ಪುತ್ತೂರಿಗೆ ಗ್ರಾಮೀಣ ಪ್ರದೇಶವಾಗಿ ಸುಮಾರು 25 ವರ್ಷಗಳಿಂದ ಏನೇಕಲ್ಲು, ಬಲ್ಪ, ಅಡ್ಡಬೈಲು, ಪಂಜ, ನಿಂತಿಕಲ್ಲು, ಕಾಣಿಯೂರು ಮಾರ್ಗವಾಗಿ ಕೆಎಸ್ಆರ್ಟಿಸಿ ಸಂಚರಿಸುತ್ತಿತ್ತು. ಇದೀಗ ಈ ಬಸ್ ಇಂದಿನಿಂದ ಸಂಚಾರವನ್ನು ಸ್ಥಗಿತಗೊಳಿಸಿದೆ.

ಕುಕ್ಕೆ ಸುಬ್ರಹಣ್ಯದಿಂದ ಈ ಕೆಎಸ್ಆರ್ಟಿಸಿ ಬಸ್ ಬೆಳಗ್ಗಿನ ಜಾವ 6:30ಕ್ಕೆ ಹೊರಟು ಪುತ್ತೂರಿಗೆ ೮.೧೫ಕ್ಕೆ ತಲುಪುತಿತ್ತು. ಇದೀಗ ಈ ಬಸ್ ಇಂದಿನಿಂದ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಇದರ ಬದಲಾಗಿ ಬೆಂಗಳೂರಿನಿಂದ ಧರ್ಮಸ್ಥಳ, ಸುಬ್ರಮಣ್ಯಕ್ಕೆ ಬರುವ ಕೆಎಸ್ಆರ್ಟಿಸಿ ಅಶ್ವಮೇಧ ಬಸ್ಸನ್ನು ನಿರ್ವಾಹಕನಿಲ್ಲದೆ ಪುತ್ತೂರಿಗೆ ಸಂಚರಿಸುವಂತೆ ನಿಯೋಜಿಸಿರುತ್ತಾರೆ.
ಆದರೆ ಈ ಬಸ್ ಸುಬ್ರಮಣ್ಯದಿಂದ 7:00 ಗಂಟೆಗೆ ಹೊರಟು ಪುತ್ತೂರು ತಲುಪುವ ವೇಳೆ 9:15 ಗಂಟೆಯಾಗುತ್ತಿದ್ದು, ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಇನ್ನಿತರ ಸರಕಾರಿ ನೌಕರರಿಗೆ ಇದರಿಂದ ಬಹಳ ತೊಂದರೆಯಾಗುತ್ತಿದ್ದು ಶಾಲಾ ಮಕ್ಕಳು ಸೇರಿದಂತೆ ಶಿಕ್ಷಕರು ಹಾಗೂ ಸ್ಥಳೀಯರು ಬಹಳ ಆಕ್ರೋಶ ವ್ಯಕ್ತ ಪಡಿಸಿದ್ದು. ಸರ್ಕಾರ ಇತರ ಭಾಗ್ಯಗಳನ್ನು ನೀಡುವ ಬದಲು ಶಾಲಾ ಮಕ್ಕಳ ಬಗ್ಗೆ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.