ಮಂಗಳೂರು, ಮೇ 28 (Daijiworld News/MSP): ಶಾಲಾ ಮಕ್ಕಳನ್ನು ಸಾಗಿಸುವಾಗ ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳು ಹೇಗಿರಬೇಕು, ಮತ್ತು ವಾಹನ ಸಾಮರ್ಥ್ಯಕ್ಕಿಂತ ಹೆಚ್ಚುವರಿ ಶಾಲಾ ಮಕ್ಕಳನ್ನು ಸಾಗಿಸಬಾರದು, ಗೂಡ್ಸ್ ವಾಹನದಲ್ಲಿ ಪ್ರಯಾಣಿಕರ ಸಾಗಾಟ, ವಾಹನ ಚಾಲಕರು ಸರಿಯಾಗಿ ಸಂಚಾರ ನಿಯಮ ಪಾಲನೆ ಮಾಡಬೇಕು ಹಾಗೂ ಎಲ್ಲರೂ ಅತ್ಯಂತ ಮೂಲಭೂತವಾದಂತಹ ಸುರಕ್ಷತಾ ನಿಯಮಗಳನ್ನು ಪಾಲಿಸಿಬೇಕು ಎನ್ನುವ ದೃಷ್ಟಿಯಿಂದ ಮಂಗಳೂರು ನಗರ ಟ್ರಾಪಿಕ್ ಪೊಲೀಸ್ ನಗರದ ಹಲವೆಡೆ ಸಂಚರಿಸಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಆದರೆ ಈ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ನಿರಂತರವಾಗಿ ಮುಂದುವರಿದಿದೆ ಇದೊಂದೆ ಅಲ್ಲದೇ ಸಾರಿಗೆ ನಿಯಮಗಳು ಸಾರ್ವಜನಿಕರಿಂದ ಹಾಗೂ ಚಾಲಕರಿಂದಲೂ ಸಹ ಪಾಲನೆ ಆಗಬೇಕು. ವಾಹನಗಳ ವೇಗದ ಮಿತಿ ಕಡಿಮೆಗೊಳಿಸಿಬೇಕು ವಾಹನದ ಅಗತ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಾಟ ಮಾಡುವುದು ಅಪರಾಧ , ಮುಂತಾದ ವಿಚಾರಗಳ ಬಗ್ಗೆ ರಿಕ್ಷಾ ಚಾಲಕ, ಗೂಡ್ಸ್ ವಾಹನ ಚಾಲಕ, ಕಾರ್ಮಿಕ ಪ್ರಯಾಣಿಕರಿಗೆ ಬಿತ್ತಿ ಪತ್ರ ವಿತರಿಸಿ ಸಂಚಾರ ನಿಯಮ ಪಾಲಿಸುವಂತೆ ಮಂಗಳೂರು ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸಿ ನಿಯಮ ಪಾಲಿಸುವಂತೆ ಪ್ರತಿಜ್ಞೆ ಭೋದಿಸಿದರು.