ಪುತ್ತೂರು, ನ 28 : ಎರಡು ವರ್ಷದ ಮಗುವೊಂದು ಆಕಸ್ಮಿಕವಾಗಿ ಮನೆಯ ತೋಟದಲ್ಲಿರುವ ಕೆರೆಯಲ್ಲಿ ಬಿದ್ದು ಮೃತಪಟ್ಟ ಘಟನೆ ನ 28 ರಂದು ಇಲ್ಲಿನ ಬಲ್ನಾಡುವಿನ ನಡುಮನೆಯಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುದರ್ಶನ್ ಮತ್ತು ಅಶ್ವಿನಿ ದಂಪತಿ ಪುತ್ರ ಶೌರ್ಯ(2) ಮೃತಪಟ್ಟ ಮಗು. ರಜೆಯಲ್ಲಿ ತನ್ನ ತಾಯಿ ಮನೆಗೆ ಬಂದಿದ್ದ ಅಶ್ವಿನಿಯವರು ಪುತ್ರ ಶೌರ್ಯನನ್ನು ಅಜ್ಜ ಅಜ್ಜಿಯೊಂದಿಗೆ ಬಿಟ್ಟು ಹೋಗಿದ್ದರು. ಆದರೆ ಇಂದು ಮೊಮ್ಮಗ ಶೌರ್ಯನನ್ನು ಬೋಜರಾಜ ತೋಟದಲ್ಲಿ ಸುತ್ತಾಡಿಸಿ ಮನೆಯಲ್ಲಿ ಬಿಟ್ಟು ಮತ್ತೆ ತೋಟದ ಕೆಲಸಕ್ಕೆಂದು ಹಿಂತಿರುಗಿದ್ದರು. ಇದೇ ವೇಳೆ ಮತ್ತೆ ಶೌರ್ಯ ಅಜ್ಜನ್ನು ಹಿಂಬಾಲಿಸಿ ಹೋಗಿ ಕೆರೆಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.