ಮಂಗಳೂರು, ಮೇ28(Daijiworld News/SS): ವಾಮಂಜೂರು ಸೈಂಟ್ ಜೋಸೆಫ್ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಈ ಬಾರಿಯ ಶೈಕ್ಷಣಿಕ ವರ್ಷದ ವಾರ್ಷಿಕ ಸಭೆಯು ನಡೆದಿದೆ.
ಈ ಕಾರ್ಯಕ್ರಮದಲ್ಲಿ ಗತ ವರ್ಷದ ಸಂಘದ ಕಾರ್ಯ ಸಾಧನೆಗಳ ಮೌಲ್ಯಮಾಪನ ಮತ್ತು ಕರ್ಚು ವೆಚ್ಚಗಳ ಲೆಕ್ಕಪತ್ರ ಮಂಡನೆ ಮಾಡಲಾಯಿತು.
ಸಂಘದ ಮುಖ್ಯ ಉದ್ದೇಶವಾದ ಶಾಲಾ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಅಂಗವಾಗಿ ಶಾಲಾ ಹಳೆ ವಿದ್ಯಾರ್ಥಿಗಳು ಮಾಡಿದ ಪರಿಶ್ರಮದ ಫಲವಾಗಿ ಶಾಲಾ ಕೀರ್ತಿಯು ಹೆಚ್ಚಿ ಮಕ್ಕಳ ಸಂಖ್ಯೆಯಲ್ಲಿ ಸುಮಾರು 35ರಿಂದ 40 ಅಧಿಕೃತಗೊಂಡಿರುವುದನ್ನು ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಅಭಿನಂದಿಸಿದರು.
ಇದೇ ರೀತಿಯಲ್ಲಿ ದೇಶದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಶಾಲೆಯ ಶಿಕ್ಷಕರು ಸರ್ಕಾರದ ಮೊರೆ ಹೋಗುವುದು ತಪ್ಪುತ್ತದೆ ಎಂದು ಸಭೆಯಲ್ಲಿ ಶಿಕ್ಷಕರು ಹೇಳಿದರು.
ಸಭೆಯಲ್ಲಿ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಮಾಡಬೇಕಾದ ಕಾರ್ಯಕ್ರಮದ ಬಗ್ಗೆ ಮತ್ತು ಮಕ್ಕಳ ಬ್ಯಾಗ್ ರಹಿತ ದಿನಗಳ ಸದುಪಯೋಗ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಜೊತೆಗೆ ಪ್ರಸಕ್ತ ವರ್ಷದ ಶಾಲೆಯ ಕೊರತೆಯ ಬಗ್ಗೆ ಸಮಾಲೋಚನೆ ಮಾಡಲಾಯಿತು.
ಮಾತ್ರವಲ್ಲ, ಹಳೆ ವಿದ್ಯಾರ್ಥಿ ಸಂಘವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆಗಸ್ಟ್ ತಿಂಗಳಲ್ಲಿ ವಾಲಿಬಾಲ್ ಕ್ರೀಡಾಕೂಟ ಆಯೋಜಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.