ಬಂಟ್ವಾಳ, ಸೆ.21(DaijiworldNews/AA): ಸಹಕಾರಿ ಸಂಸ್ಥೆಗಳು ಹೆಚ್ಚು ಹೆಚ್ಚು ಶಾಖೆಗಳ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದರೆ, ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳು ಒಂದಕ್ಕೊಂದು ವಿಲೀನಗೊಂಡು ಜನರಿಂದ ದೂರವಾಗುತ್ತಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ.ಬಂಟ್ವಾಳ ಇವರ ಆಶ್ರಯದಲ್ಲಿ ವಿಂಶತಿ ಸಂಭ್ರಮದ ಅಂಗವಾಗಿ ನಡೆದ ವರ್ತಕ ಗ್ರಾಹಕರ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಬ್ಯಾಂಕ್ಗಳ ತವರೂರು ಎಂದು ಹೇಳಿದ್ದೆವು. ಆದರೆ ಪರಸ್ಪರ ವಿಲೀನ ಪ್ರಕ್ರಿಯೆ ಬ್ಯಾಂಕ್ ಗಳನ್ನು ಜನರಿಂದ ದೂರಮಾಡಿದೆ ಎಂದ ಅವರು, ವಾಣಿಜ್ಯ ಬ್ಯಾಂಕ್ ಗಳಲ್ಲಿ ಭಾಷೆ ಬಾರದವರು ಇದ್ದಾರೆ. ಆದರೆ ಸಹಕಾರಿ ಸಂಸ್ಥೆಗಳಲ್ಲಿ ಈ ನೆಲದ ಸಂಸ್ಕೃತಿ ಅರಿತವರು ಮತ್ತು ಭಾಷೆ ಬಲ್ಲವರು ಇರುವುದು ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ. ವಿಂಶತಿ ಸಂಭ್ರಮದವರೆಗೆ ತಲುಪಲು ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿದ ಅವರು, ಸಹಕಾರಿ ಕ್ಷೇತ್ರ ಜಿಲ್ಲೆಯ ರೈತರಿಗೆ ಗೆಲುವು ತಂದಿದೆ ಎಂದರು.
ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರೀತಿ ಮತ್ತು ಸೌಹಾರ್ದತೆಯನ್ನು ಸಾರುವ ಸಂಘಟನೆಯಾಗಿ ವರ್ತಕರ ಸಂಘ ಬೆಳೆದು ನಿಂತಿದ್ದು, ಇದು ಬ್ಯಾಂಕಿನ ಉಜ್ವಲ ಭವಿಷ್ಯಕ್ಕೆ ನಾಂದಿ ಎಂದು ಹೇಳಿದರು.
ವರ್ತಕರ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವರ್ತಕರು ಮತ್ತು ಗ್ರಾಹಕರ ನಡುವಣ ಸಂಬಂಧ ಹೆಚ್ಚು ಅನ್ಯೋನ್ಯವಾಗಿರಬೇಕು ಎನ್ನುವ ಉದ್ದೇಶದಿಂದ ಈ ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪುರಸಭಾ ಆಧ್ಯಕ್ಷ ವಾಸು ಪೂಜಾರಿ, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಮಂಗಳೂರು ಧವಳ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಸುದರ್ಶನ್ ಜೈನ್, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಸಾರ್ವಜನಿಕ ಉದ್ಯೋಗಸ್ಥರ ಸಹಕಾರಿ ಸಂಘದ ಅಧ್ಯಕ್ಷ ಕೆ.ಜಯಂತ್ ನಾಯಕ್, ರಾಜ್ಯ ಸರ್ಕಾರಿನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್, ವಿಟ್ಲ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ರಮೇಶ್ ನಾಯಕ್ ರಾಯಿ, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ದೇವಾಡಿಗ, ಸಂಘದ ಉಪಾಧ್ಯಕ್ಷ ಮಂಜುನಾಥ ಅಗರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಮಾರ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕರಾದ ದಿವಾಕರ ದಾಸ್ ಸ್ವಾಗತಿಸಿದರು, ಲೋಕೇಶ್ ಸುವರ್ಣ ವಂದಿಸಿದರು. ಹೆಚ್ಕೆ ನಯನಾಡು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಪ್ರವರ್ತಕರನ್ನು ಸಹಿತ, ಬ್ಯಾಂಕಿನ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಸನ್ಮಾನಿಸಲಾಯಿತು. 12 ಮಂದಿ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡಲಾಯಿತು.
ಉಪಾಧ್ಯಕ್ಷರಾದ ಮಂಜುನಾಥ ಅಗರಿ, ನಿರ್ದೇಶಕರಾದ ಗಜೇಂದ್ರ ಪ್ರಭು, ನಾರಾಯಣ ಸಿ ಪೆರ್ನೆ, ಸುಧಾಕರ ಸಾಲ್ಯಾನ್, ಹೇಮಂತ್ ಕುಮಾರ್ ಜೈನ್, ರವೀಂದ್ರ, ರಾಜೇಶ್, ಜಯರಾಜ್, ಸ್ವಪ್ನಾ ರಾಜರತ್ನ, ವಿಜಯಕುಮಾರಿ ಇಂದ್ರ, ಮೈಕಲ್ ಡಿಕೋಸ್ತಾ, ಡಾ.ಸುದೀಪ್ ಕುಮಾರ್, ಬಟ್ಯಪ್ಪ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.