ಕಾಸರಗೋಡು, ಸೆ.22(DaijiworldNews/AA): ನೀರು ತುಂಬಿದ್ದ ಬಕೆಟ್ ನೊಳಗೆ ಬಿದ್ದು ಒಂದು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಮಂಜೇಶ್ವರ ಸಮೀಪದ ಕಡಂಬಾರ್ ನಲ್ಲಿ ಶನಿವಾರ ನಡೆದಿದೆ.
ಕಡಂಬಾರ್ ನ ಕೆ. ಎ ಹಾರಿಸ್ ಹಾಗೂ ಖೈರುನ್ನಿಸಾ ದಂಪತಿ ಪುತ್ರಿ ಫಾತಿಮಾ ಮೃತಪಟ್ಟ ಮಗು.
ಮನೆಯೊಳಗೆ ಆಟವಾಡುತ್ತಿದ್ದ ಮಗು ಶೌಚಾಲಯದಲ್ಲಿ ನೀರು ತುಂಬಿದ್ದ ಬಕೆಟ್ಗೆ ಬಿದ್ದಿರುವುದು ಕಂಡುಬಂದಿದೆ. ಮನೆಯವರು ಗಮನಿಸಿ ಕೂಡಲೇ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಗಲೇ ಮೃತಪಟ್ಟಿತ್ತು. ಘಟನೆ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.