ಮಂಗಳೂರು,ಮೇ30(DaijiworldNews/AZM): ಮಂಗಳೂರು ನಗರದಲ್ಲಿ ಮೀನು ಸಾಗಟ ಲಾರಿಯಿಂದ ರಸ್ತೆಗೆ ಹೊರಬಿಡುವ ತ್ಯಾಜ್ಯ ನೀರಿನ ಹಿನ್ನೆಲೆ ಲಾರಿ ಚಾಲಕರ ವಿರುದ್ಧ ಇಂದು ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ.
ತ್ಯಾಜ್ಯ ನೀರು ಹೊರಡಬಿಡುವ ಲಾರಿ ಚಾಲಕರ ವಿರುದ್ಧ ಪೊಲೀಸರು ದಂಡ ವಿಧಿಸಿದ್ದಾರೆ ಹಾಗೂ ನಿಯಮ ಉಲ್ಲಂಘಿಸುವ ಲಾರಿ ಚಾಲಕರ ವಿರುದ್ಧ ಇಲಾಖಾಧಿಕಾರಿಗಳು ಸೂಕ್ತ ಶಿಸ್ತುಕ್ರಮ ಕೈಗೊಂಡಿದ್ದಾರೆ. ಲಾರಿಯಿಂದ ರಸ್ತೆಯುದ್ಧಕ್ಕೂ ತ್ಯಾಜ್ಯ ನೀರು ಬೀಳುತ್ತಿರುವ ಹಿನ್ನಲೆ ಪರಿಸರ ಮಾಲಿನ್ಯವಾಗುತ್ತಿದೆ ಅಲ್ಲದೆ, ದುರ್ವಾಸನೆಯಿಂದ ಸಾರ್ವಜನಿಕರಿಗೆ, ಉಳಿದ ವಾಹನಗಳಿಗೆ ಸಂಚರಿಸಲು ಕಷ್ಟಕರವಾಗುತ್ತಿದೆ.