ಕಾಸರಗೋಡು,ಮೇ 31(Daijiworld News/MSP): ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ 80 ಲಕ್ಷ ರೂ. ಹವಾಲ ಹಣವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬದಿಯಡ್ಕ ಅಬಕಾರಿ ದಳದ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮಹರಾಷ್ಟ್ರ ನಿವಾಸಿ ಭರತ್ ದೇಶ್ ಮುಖ್ ಎಂಬಾತನ ಶರ್ಟ್, ಪ್ಯಾಂಟ್ ಹಾಗೂ ಜಾಕೆಟ್ ನೊಳಗೆ ತುಂಬಿಸಿಕೊಂಡು ಹಣ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಅಧಿಕಾರಿಗಳು ಬಸ್ಸು ತಪಾಸಣೆ ನಡೆಸುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು ಆರೋಪಿಯನ್ನು ಬಂಧಿಸಲಾಗಿದೆ.