ಮೂಡುಬಿದಿರೆ, ಸೆ.24(DaijiworldNews/AK): ಐತಿಹಾಸಿಕ ಹಿನ್ನಲೆಯುಳ್ಳ ಮೂಡುಬಿದಿರೆ ಅರಮನೆಯ ಹೆಬ್ಬಾಗಿಲು ಘನ ವಾಹನವೊಂದರ ಚಾಲಕನ ನಿರ್ಲಕ್ಷ್ಯಕ್ಕೆ ಅಂಶಿಕ ಹಾನಿಗೊಳಗಾಗಿದೆ.
ತಮಿಳುನಾಡು ನೋಂದಾಯಿತ ಟ್ರಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಮಾರಕವು ಭಾಗಶಃ ಹಾನಿಗೊಳದಾಗಿದೆ. ಪೋಲಿಸ್ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಟ್ರಕ್ ಚಾಲಕನ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಿಂದ ಕೇಸು ದಾಖಲು ಮಾಡಿದ್ದಾರೆ. 700 ವರ್ಷಗಳ ಇತಿಹಾಸ ಹೊಂದಿರುವ ಮೂಡುಬಿದಿರೆ ಅರಮನೆಯು ಜೈನರ ಪರಂಪರೆಯ ಚೌಟರ ಮನೆತನದ ಆಧೀನದಲ್ಲಿದೆ.