ಮಂಗಳೂರು, ಮೇ31(Daijiworld News/SS): ಶಾಸಕ ಡಾ.ಭರತ್ ಶೆಟ್ಟಿ ಅವರು ಸ್ವಯಂ ಪ್ರೇರಿತವಾಗಿ ನೀರು ಪೂರೈಕೆ ಮಾಡುತ್ತಿದ್ದ ವಾಹನದಲ್ಲಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಕಿತ್ತು ಹಾಕಿರುವ ಘಟನೆ ನಡೆದಿದೆ.
ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿರುವ ಹಿನ್ನಲೆ, ಕಳೆದ ಕೆಲ ದಿನಗಳಿಂದ ಶಾಸಕ ಭರತ್ ಶೆಟ್ಟಿ ನೀರಿನ ಅಭಾವವಿರುವ ಮನೆ ಮನೆಗಳಿಗೆ ನೀರು ಪೂರೈಕೆ ಮಾಡುವ ವ್ಯವಸ್ಥೆಯನ್ನು ಸ್ವಯಂ ಪ್ರೇರಿತವಾಗಿ ಮಾಡಿಸುತ್ತಿದ್ದರು. ಆದರೆ, ಈ ವಾಹನದಲ್ಲಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ. ಮಾತ್ರವಲ್ಲ, ಅದರಲ್ಲಿ ನಿಸ್ವಾರ್ಥವಾಗಿ ತನ್ನ ದೈನಂದಿನ ಕೆಲಸವನ್ನೂ ಬಿಟ್ಟು ನೀರು ಸರಬರಾಜು ಮಾಡುತ್ತಿದ್ದ ಭರತ್ ಎಂಬವರನ್ನು ದೂಡಿ ಹಾಕಿ ನಿಂದಿಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಕುರಿತು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.