ಕಡಬ, ಜೂ 01 (Daijiworld News/MSP): ಸುಲಭ ಕಂತುಗಳ ಮೂಲಕ ಚಿನ್ನಾಭರಣ ನೀಡುವ ಸ್ಕೀಂ ಮೂಲಕ ಹಣ ಸಂಗ್ರಹಿಸಿ ಗ್ರಾಹಕರಿಗೆ ಚಿನ್ನ ನೀಡದೆ ವಂಚಿಸಿದ ಆರೋಪ ಕಡಬದ ರಾಜಧಾನಿ ಜ್ಯುವೆಲ್ಲರಿ ಮಾಲೀಕನ ಮೇಲೆ ಕೇಳಿಬಂದಿದೆ.
ಆದರೆ ಗ್ರಾಹಕರ ಈ ಚಿನ್ನಾಭರಣ ಸ್ಕೀಮ್ ಮುಕ್ತಾಯವಾಗುತ್ತಿದ್ದಂತೆ ರಾಜಧಾನಿ ಜ್ಯುವೆಲ್ಲರ್ಸ್ ಮುಚ್ಚಿದೆ. ಹೀಗಾಗಿ ಸ್ಕೀಂ ಮೂಲಕ ಹಣ ತೊಡಗಿಸಿದ ಗ್ರಾಹಕರಿಗೆ ಪಂಗನಾಮ ಹಾಕಿ ಗ್ರಾಹಕರ ಸ್ಕೀಮ್ ಹಣದೊಂದಿಗೆ ರಾಜಧಾನಿ ಜ್ಯುವೆಲ್ಲರ್ಸ್ ಮಾಲೀಕ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಸ್ಕೀಂನಲ್ಲಿ ತಾನು ಹೆಸರು ನೋಂದಾಯಿಸಿ ಹಲವು ನೋಂದಾಯಿಸಿ ಹಲವು ತಿಂಗಳಿಂದ ಕಂತುಗಳ ಮೂಲಕ ಒಟ್ಟು ೧೨,೫೦೦ ರೂ.ಪಾವತಿಸಿದ್ದೆ. ಆದರೆ ಅದರ ಮಾಲಕರು ನನ್ನಂತೆ, ಯೋಜನೆಗೆ ಹಣ ಹೂಡಿದ ನೂರಾರು ಮಂದಿಗೆ ಚಿನ್ನಾಭರಣ ನೀಡದೆ ಲಕ್ಷಾಂತ್ರ ರೂಪಾಯಿ ವಂಚಿಸಿದ್ದಾರೆ ಎಂದು ಆಲೀಸ್ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದಾರೆ.