ಮಂಗಳೂರು, ಅ. 09(DaijiworldNews/TA):ಸಮಾಜದ ಶುಭಾಶುಭ ಕಾರ್ಯಕ್ರಮಗಳಿಗೆ ಬೆಳಕು ಚೆಲ್ಲುವ ಅಚ್ಚಳಿಯದೆ ಮರೆಯದ ನೆನಪಾಗಿ ಉಳಿಸುವ ಶ್ರೇಷ್ಠ ಕಾಯಕ ಛಾಯಾಚಿತ್ರಗ್ರಾಹಕರದ್ದು ಎಂದು ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಎಮ್. ಸುಧಾಕರ ಮಲ್ಯ ಅವರು ಹೇಳಿದ್ದಾರೆ.
ಅವರು ವಿಶ್ವ ಅಂಚೆ ದಿನಾಚರಣೆಯಂದು SKPA ಮಂಗಳೂರು ವಲಯದ ವತಿಯಿಂದ ವಿಶ್ವ ಅಂಚೆ ದಿನಾಚರಣೆ ಪ್ರಯುಕ್ತ, ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಇದರ ವತಿಯಿಂದ ಸಮಗ್ರ ರಕ್ಷಣಾ ಯೋಜನೆ ಮತ್ತು ಅಪಘಾತ ವಿಮೆ ಅಂಚೆ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಾಸ್ತಾವಿಕ ಮಾತನಾಡಿದರು.
ಛಾಯಾಚಿತ್ರಗ್ರಾಹಕರ ಬದುಕಿನ ಸಂಕಷ್ಟಗಳಿಗೆ ಬಲವಾಗುವಂತೆ ಭಾರತೀಯ ಅಂಚೆ ಇಲಾಖೆಯ ಅಪಘಾತ ವಿಮಾ ಸೌಲಭ್ಯವನ್ನು ವಿಶ್ವ ಅಂಚೆ ದಿನಾಚರಣೆಯಂದು ಸದಸ್ಯರೆಲ್ಲರೂ ಅಪಘಾತ ವಿಮೆಯನ್ನು ಮಾಡುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯ ಪಟ್ಟರು.
SKPA ದ ಕ - ಉಡುಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಶ್ರೀಮತಿ ಅಮಿತಾ ಎಸ್. ರಾವ್ ( ಪೋಸ್ಟ್ ಮಾಸ್ಟರ್ ಪಣಂಬೂರು, ಮಂಗಳೂರು.) ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ SKPA ದ.ಕ-ಉಡುಪಿ ಸಂಚಾಲಕರಾದ ಕರುಣಾಕರ ಕಾನಂಗಿ,ಪಿ.ದಿನೇಶ್ ಉಪ ಅಂಚೆ ಅಧೀಕ್ಷಕರು ಅಂಚೆ ಇಲಾಖೆ, ರಮೇಶ್ ಕಲಾಶ್ರೀ ಉಪಾಧ್ಯಕ್ಷರು SKPA ದ.ಕ - ಉಡುಪಿ ಜಿಲ್ಲೆ, ಆನಂದ್ ಎನ್. ಬಂಟ್ವಾಳ್ ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರು, ವಿಠ್ಠಲ ಚೌಟ ಮಾಜಿ ಸಂಚಾಲಕರು, ಜಗನಾಥ ಶೆಟ್ಟಿ ಮಾಜಿ ಜಿಲ್ಲಾಧ್ಯಕ್ಷರು, ವಲಯಧ್ಯಕ್ಷರಾದ ಹರೀಶ್ ಅಡ್ಯಾರ್, ಗೌರವಧ್ಯಕ್ಷರಾದ ಪದ್ಮನಾಭ ಸುವರ್ಣ, ವಲಯದ ಪ್ರದಾನ ಕಾರ್ಯದರ್ಶಿ ಮತ್ತು ಜಿಲ್ಲಾ ಕಟ್ಟಡ ಸಮೀತಿ ಪ್ರದಾನ ಕಾರ್ಯದರ್ಶಿ ಅಜಯ್ ಕುಮಾರ್, ಕೋಶಾಧಿಕಾರಿ ಅರ್ಜುನ್ ಶೃಂಗೇರಿ ಮತ್ತು ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಅಂಚೆ ವಿಭಾಗದ ದಯಾನಂದ್ ಕತ್ತಲ್ ಸಾರ್ ಮತ್ತು ಸುಭಾಷ್ ಪಿ ಸಾಲ್ಯಾನ್ ರವರು ಅಂಚೆ ಯೋಜನೆಗಳ ಬಗ್ಗೆ ಸಮಗ್ರ ವಿವರವನ್ನು ಸದಸ್ಯರಿಗೆ ನೀಡಿದರು. ಸದಸ್ಯರೆಲ್ಲಾ ಅಪಘಾತ ವಿಮೆಯ ಮತ್ತು ಅಂಚೆ ಇಲಾಖೆಯ ಇನ್ನಿತರ ಸವಲತ್ತುಗಳನ್ನು ಪಡೆದರು.