ಮೂಡುಬಿದಿರೆ, ಅ.09(DaijiworldNews/AK):ಮಂಗಳೂರಿನಿಂದ ಮೂಡುಬಿದಿರೆ ಮಾರ್ಗವಾಗಿ ಕಾರ್ಕಳ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದರ ಧಾವಂತಕ್ಕೆ ಕಾರಣಮಾಗಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ ಅವರು ಬಸ್ಸನ್ನು ಸ್ವಾಧೀನ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಂಗಳೂರು – ಮೂಡಬಿದ್ರೆ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ KA 19 AB 1339 ಸಂಖ್ಯೆಯ ಜೈನ್ ನಾಮಾಂಕಿತದ ಖಾಸಗಿ ಬಸ್ಸನ್ನು ಅದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಚಾಲಯಿಸಿ ಮತ್ತೊಂದು ಖಾಸಗಿ ಬಸ್ಸನ್ನು ಓವರ್ ಟೇಕ್ ಮಾಡಿದ್ದನು.
ಚಾಲಕನ ಅಜಾಗರೂಕತೆಯ ಚಾಲನೆಯು ಪ್ರಯಾಣಿಕರಿಗೆ ಮಾತ್ರವಲ್ಲ ರಸ್ತೆಯಲ್ಲಿ ಹೋಗುತ್ತಿದ್ದವರ ಎದೆ ಝಲ್ಲೆನಿಸಿದೆ.ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬಂದಿರುವಂತೆ ಮೂಡುಬಿದಿರೆ ಸಮೀಪದ ತೋಡಾರು ಎನಪೋಯ ಮೆಡಿಕಲ್ ಕಾಲೇಜು ಬಳಿಯ ಏಕರೂಪದ ರಸ್ತೆಯಲ್ಲಿ ಇನ್ನೊಂದು ಬಸ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ವಾಹನಗಳನ್ನೂ ಕೂಡಾ ಲೆಕ್ಕಿಸದೆ ಬಸ್ಸು ಚಾಲಕ ವಾಹನ ಚಲಾಯಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ನಾಮಾಂಕಿತದ ಖಾಸಗಿ ಬಸ್ಸಿನ ಚಾಲಕ ಮೂಡುಬಿದಿರೆ ತೋಡಾರು ನಿವಾಸಿ ಮಹಮ್ಮದ್ ಇಸ್ಮಾಯಿಲ್ (32) ವಿರುದ್ಧ ಮೂಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಸ್ಸು ಚಾಲಕನ ಡ್ರೈವಿಂಗ್ ಲೆಸನ್ಸ್ ಅನ್ನು ರದ್ದುಪಡಿಸಬೇಕೆಂದು ಕೋರಿ ಮಂಗಳೂರು ಆರ್ ಟಿ ಓ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.