ಕುಂದಾಪುರ, 10(DaijiworldNews/AK): ಮಹಾತ್ಮರು ಅವರ ಕಠಿಣವಾದ ಪರಿಶ್ರಮದಿಂದ ಆಧ್ಯಾತ್ಮಿಕವಾಗಿ ಉನ್ನತ ಶ್ರೇಣಿಯನ್ನು ಹೊಂದುತ್ತಾರೆ ಅವರು ತೋರಿಸಿಕೊಟ್ಟ ದಾರಿಯಲ್ಲಿ ಸಾಗಬೇಕು ಆಗ ನಾವು ಸ್ವರ್ಗದಲ್ಲಿ ದೇವರನ್ನು ಕಾಣುತ್ತೇವೆ ಎಂದು ಪ್ರಭಾಷಣಕಾರ ನೌಫಲ್ ಸಕಾಫಿ ಕಳಸ ಹೇಳಿದರು.
ಅವರು ಬುಧವಾರ ಕುಂದಾಪುರದ ಜೆ. ಎಮ್. ರಸ್ತೆಯಲ್ಲಿರುವ ದರ್ಗಾ ಶರೀಫ್ ಹಝ್ರತ್ ಸುಲ್ತಾನ್ ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ ಯಲ್ಲಿ ಹಮ್ಮಿಕೊಳ್ಳಲಾದ ಕುಂದಾಪುರ ಉರೂಸ್ ಮುಬಾರಕ್ ಕಾರ್ಯಕ್ರಮದಲ್ಲಿ ಮಗರಿಬ್ ನಮಾಜಿನ ನಂತರ ನಡೆದ ವಾರ್ಷಿಕ ಜಲಾಲಿಯ್ಯ ರಾತೀಬ್ ಹಾಗೂ ಮತ ಪ್ರಭಾಷಣ ಮಾಡುತ್ತಿದ್ದರು.
ಇದೇ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಎಸ್.ಡಿ.ಎಂ.ಸಿ. ರಾಜ್ಯ ನಿರ್ದೇಶಕ ಅಬ್ದುಲ್ ಸಲಾಂ ಚಿತ್ತೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆ ಉಳಿದರೆ ಸರ್ವ ಧರ್ಮಗಳ ದೇಗುಲ ಉಳಿದಂತೆ ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಹೋರಾಟಕ್ಕೆ ನಾವೆಲ್ಲರೂ ಬದ್ಧರಾಗಬೇಕು ಎಂದರು.
ಕೆ.ಎಸ್. ಆಟಕೋಯ ತಂಬಳ್ ಕುಂಬೋಳ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ದರ್ಗಾ ಶರೀಫ್ ಚಾರಿಟೇಬಲ್ ಟ್ರಸ್ಟ್(ರಿ.) ಕುಂದಾಪುರದ ಅಧ್ಯಕ್ಷ ಕೆ.ಎಸ್ ಕಾಸಿಂ ಕೋಯ ಅಧ್ಯಕ್ಷತೆ ವಹಿಸಿದ್ದರು. ಮುದರ್ರಿಸ್ ಎಂ ಜೆ ಎಂ ಕೋಡಿ ಇಲ್ಲಿನ ಯೂಸುಫ್ ಸಕಾಫಿ ದುವಾ ನಡೆಸಿದರು. ಕುಂದಾಪುರ ಜಾಮಿಯಾ ಮಸೀದಿಯ ಉಪಾಧ್ಯಕ್ಷ ಮುಜಾವರ್ ಅಬು ಮಹಮ್ಮದ್ ಪ್ರಶಸ್ತಿ ಪತ್ರ ವಾಚಿಸಿದರು.
ಶೇಕ್ ಫರೀದ್ ಭಾಷಾ ಸಾಹೇಬ್ ಖಾಸಿಂ, ಎ.ಕೆ. ಯೂಸುಫ್ ಸಾಹೇಬ್, ಅಕ್ಬರ್ ಆಲಿ ಜುಕಾಕೋ, ಅಬ್ದುಲ್ ರೆಸಾರ್ಟ್, ಮೊಹಮ್ಮದ್ ರಯಾನ್ ಹಿಮಾಮಿ ಸಕಾಫಿ ಇವರನ್ನು ಸನ್ಮಾನಿಸಲಾಯಿತು. ಕುಂದಾಪುರ ಜಾಮಿಯಾ ಮಸೀದಿಯ ಖತೀಬರಾದ ಮೌಲಾನಾ ಶಾಹಿದ್ ರಝಾ, ಕುಂದಾಪುರ ಜಾಮಿಯಾ ಮಸೀದಿ ಅಧ್ಯಕ್ಷ ವಸಿಂ ಭಾಷಾ, ಹಾರೂನ್ ಸಾಹೇಬ್ ಉಪಸ್ಥಿತರಿದ್ದರು.