ಮಂಗಳೂರು, ಜೂ 02 (Daijiworld News/SM): 58 ಜನರಿಗೆ ಉದ್ಯೋಗದ ಭರವಸೆ ನೀಡಿ ಕುವೈಟ್ ಗೆ ಕಳುಹಿಸಲಾಗಿದ್ದು, ಇದರಲ್ಲಿ ಮಾಣಿಕ್ಯ ಏಷೋಷಿಯೆಟ್ಸ್ ಮ್ಯಾನ್ ಪವರ್ ಕನ್ಸಲ್ ಟೆನ್ಸಿ ಸಂಸ್ಥೆಯ ಪಾಲು ಇಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಂಸ್ಥೆಯ ಪ್ರಸಾದ್ ಶೆಟ್ಟಿ, ಮಾಣಿಕ್ಯ ಏಷೋಷಿಯೆಟ್ಸ್ ಮ್ಯಾನ್ ಪವರ್ ಕನ್ಸಲ್ ಟೆನ್ಸಿ ಸಂಸ್ಥೆಯು 58 ಜನರನ್ನು ಉದ್ಯೋಗದ ನಿಮಿತ್ತ ಮುಂಬಯಿಯ ಜುಹು ಚರ್ಚ್ ರಸ್ತೆಯಲ್ಲಿರುವ ಹಾಕ್ ಕನ್ಸಲ್ ಟೆನ್ಸಿ ಫ್ರೈವೆಟ್ ಲಿಮಿಟೆಡ್ ಕಂಪೆನಿಗೆ ಕಳುಹಿಸಿ ಕೊಟ್ಟಿದೆ. ಮುಂಬೈಯ ಕಂಪೆನಿ 58 ಮಂದಿಗೆ ಕುವೈಟ್ ನಲ್ಲಿ ಅಸ್ ಪೆಕ್ಟ್ ಪೆಟ್ರೋಲಿಯಂ ಸರ್ವಿಸಸ್ ಕಂಪೆನಿಯಲ್ಲಿ ಉದ್ಯೋಗ ನೀಡಿದೆ. ಇದು ೫೮ ಮಂದಿಗೂ ತಿಳಿದಿದ್ದು, ಕುವೈಟ್ ನ ಅಸ್ ಪೆಕ್ಟ್ ಪೆಟ್ರೋಲಿಯಂ ಸರ್ವಿಸಸ್ ಕಂಪೆನಿಗೂ ಹಾಗೂ ಮಾಣಿಕ್ಯ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಣಿಕ್ಯ ಏಷೋಶಿಯೆಟ್ಸ್ ಮ್ಯಾನ್ ಪವರ್ ಸಂಸ್ಥೆ ಕೇವಲ ಹಾಕ್ ಕನ್ಸಲ್ ಟೆನ್ಸಿ ಸಂಸ್ಥೆಯೊಂದಿಗೆ ಉದ್ಯೋಗಾಕಾಂಕ್ಷಿಗಳಿಗೆ ಸಂಪರ್ಕಿಸುವ ಒಂದು ಕೊಂಡಿಯಾಗಿ ಕೆಲಸ ಮಾಡುತ್ತದೆ. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ನಮ್ಮ ಸಂಸ್ಥೆಯ ವಿರುದ್ಧ ಇಲ್ಲ ಸಲ್ಲದ ಆರೋಪಗಳು ಕೇಳಿ ಬರುತ್ತಿವೆ. ಇವುಗಳಿಗೆ ಹಾಗೂ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.