ಕಾಸರಗೋಡು, ಅ.16(DaijiworldNews/AK): ಪಡನ್ನ ಆಯಿತ್ತಳ ಸಮುದ್ರದಲ್ಲಿ ಮೀನುಗಾರಿಕಾ ಫೈಬರ್ ಬೋಟ್ ದುರಂತ ಕ್ಕೀಡಾಗಿ ಓರ್ವ ಮೃತ ಪಟ್ಟು, ಓರ್ವ ನಾಪತ್ತೆಯಾಗಿದ್ದು, 35 ಮಂದಿಯನ್ನು ರಕ್ಷಿಸಲಾಗಿದೆ.
ವಳಿಯ ಪರಂಬ ಕಡೆಯಿಂದ ಬರುತ್ತಿದ್ದ ಬೋಟ್ ದುರಂತ ಕ್ಕೆ ಸಿಲುಕಿದೆ. ಪ್ರಾಥಮಿಕ ಮಾಹಿತಿ ಯಂತೆ 37 ಮಂದಿ ಬೋಟ್ ನಲ್ಲಿದ್ದರು ಎನ್ನಲಾಗಿದೆ. ಕೇರಳ, ಒಡಿಸ್ಸಾ ನಿವಾಸಿಗಳಾದ ಬೆಸ್ತರು ಈ ಬೋಟ್ ನಲ್ಲಿದ್ದರು. ರಕ್ಷಿದವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ .
ಪರಪ್ಪನಂಗಡಿಯ ಅಬೂಬಕ್ಕರ್ ( 58) ಮೃತಪಟ್ಟವರು. ಪಡನ್ನ ನಿವಾಸಿಯ ಇಂಡಿಯನ್ ಎಂಬ ಬೋಟ್ ಬುಧವಾರ ಮಧ್ಯಾಹ್ನ ದುರಂತಕ್ಕೀಡಾಗಿದೆ. ನಾಪತ್ತೆಯಾದ ಓರ್ವನಿಗಾಗಿ ಶೋಧ ನಡೆಯುತ್ತಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ . ಇಂಪಾ ಶೇಖರ್ , ಕಣ್ಣೂರು ಡಿ ಐ ಜಿ ರಾಜ್ ಪಾಲ್ ಮಿನಾ ಮೊದಲಾದವರು ಭೇಟಿ ನೀಡಿ ದರು ಶಾಸಕ ಎಂ . ರಾಜಗೋಪಾಲ್ , ನಗರಸಭಾ ಅಧ್ಯಕ್ಷ ಟಿ . ವಿ ಶಾಂತಾ , ಉಪಾಧ್ಯ ಕ್ಷೆ ಪಿ .ಪಿ. ಮುಹಮ್ಮದ್ ರಫಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ , ಉಪಜಿಲ್ಲಾ ಧಿಕಾರಿ ಪಿ . ಅಖಿಲ್ ನೇತೃತ್ವ ನೀಡಿದರು. ಕರಾವಳಿ ಪೊಲೀಸ್ ಹಾಗೂ ಮೀನುಗಾರರು ರಕ್ಷಣಾ ಕಾರ್ಯಕ್ಕೆ ನೆರವಾದರು. ಹೊಸದುರ್ಗ ಠಾಣಾ ಸಬ್ ಇನ್ಸ್ ಪೆಕ್ಟರ್ ಹಾಗೂ ಮುಳುಗು ತಜ್ಞ ಸೈಫುದ್ದೀನ್ ರಕ್ಷಣಾ ಕಾರ್ಯಕ್ಕೆ ನೇತೃತ್ವ ನೀಡಿದರು.