ಕಾಸರಗೋಡು, ಅ.17(DaijiworldNews/TA): ಪಡನ್ನ ಆಯಿತ್ತಲ ಸಮುದ್ರ ದ ಲ್ಲಿ ಬೋಟ್ ದುರಂತದಲ್ಲಿ ನಾಪತ್ತೆ ಯಾದ ಬೆಸ್ತನ ಮೃತ ದೇಹ ಪೂಂಜಾವಿ ತೀರದಲ್ಲಿ ಗುರು ವಾರ ಪತ್ತೆಯಾಗಿದೆ .ಇದರಿಂದ ದುರಂತ ದ ಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ ನಾಪತ್ತೆಯಾಗಿದ್ದ ಮುಜೀಬ್ ರ ಮೃತ ದೇಹ ಸಂಜೆ ಪತ್ತೆಯಾಗಿದೆ. ನೌಕಾಪಡೆ , ಕರಾವಳಿ ಪೊಲೀಸ್, ಮೀನುಗಾರರು ಶೋಧ ನಡೆಸಿದ್ದರು.
ಜಿಲ್ಲಾಧಿಕಾರಿ ಕೆ. ಇಂಪಾ ಶೇಖರ್, ಎಂ.ರಾಜ ಗೋಪಾಲ್, ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಿ.ಶಿಲ್ಪಾ ನೇತೃತ್ವ ನೀಡಿ ದ್ದರು. ದುರಂತ ದಲ್ಲಿ ಮೃತಪಟ್ಟ ಅಬೂಬಕ್ಕರ್ ರವರ ಮೃತ ದೇಹ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು.
ದುರಂತ ಕ್ಕೀಡಾ ಫೈಬರ್ ಬೋಟ್ ನ ಅರ್ಧ ಭಾಗ ಆಯಿತ್ತಲ ಸಮೀಪದ ಕಡಲ ಕಿನಾರೆ ಯಲ್ಲಿ ಗುರುವಾರ ಪತ್ತೆಯಾಗಿದೆ. ಬುಧವಾರ ಮಧ್ಯಾಹ್ನ ಆಯಿತ್ತಲ ಸಮುದ್ರದಲ್ಲಿ ಫೈಬರ್ ಬೋಟ್ ದುರಂತ ಕ್ಕೀಡಾಗಿತ್ತು. ದೋಣಿಯಲ್ಲಿ ದ್ದ 37 ಮಂದಿ ಯಲ್ಲಿ 35 ಮಂದಿಯನ್ನು ರಕ್ಷಿಸಲಾಗಿತ್ತು. ಓರ್ವ ಮೃತಪಟ್ಟು, ಓರ್ವ ನಾಪತ್ತೆ ಯಾಗಿದ್ದರು. ಕರಾವಳಿ ಪೊಲೀಸರು, ಮೀನುಗಾರರು ಸಿಲುಕಿದವರನ್ನು ಮೇಲಕ್ಕೆತ್ತಿ ರಕ್ಷಿಸಿದರು.