ಕುಂದಾಪುರ, ಅ.17(DaijiworldNews/AK): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತ್ರಾಸಿ ಸಮೀಪದ ಮೊವಾಡಿಯಲ್ಲಿ ದನ (ಎತ್ತು) ಅಡ್ಡ ಬಂದ ಪರಿಣಾಮ ಕಾರು ಡಿಕ್ಕಿಯಾಗಿ ದನ ಸತ್ತು ಕಾರು ಜಖಂಗೊಂಡ ಘಟನೆ ಗುರುವಾರ ಸಂಜೆ 7.30ರ ಸುಮಾರಿಗೆ ನಡೆದಿದೆ.
ಉಡುಪಿ ಮೂಲದವರು ಬಾಡಿಗೆ ಕಾರಿನಲ್ಲಿ ಮುರುಡೇಶ್ವರ ಹೋಗಿ ಮರವಂತೆ ಬೀಚ್ ಮುಗಿಸಿ ವಾಪಾಸು ಬಾರುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪಥ ರಸ್ತೆಯಿದ್ದು, ತ್ರಾಸಿಯಿಂದ ಮುಳ್ಳಿಕಟ್ಟೆಯ ವರೆಗೂ ಬೀದಿ ದೀಪ ಇಲ್ಲದೇ ಇರುವುದಿಂದ ವಾಹನ ಚಾಲಕರಿಗೆ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೇ ರಸ್ತೆ ಮಧ್ಯೆ ದಟ್ಟವಾದ ಹುಲ್ಲು ಕಳೆಗಳು ಬೆಳೆದಿರುವುದರಿಂದ ಜಾನುವಾರುಗಳು ಮೇಯಲು ಹೆದ್ದಾರಿಯಲ್ಲಿ ಸಂಚರಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.