ಬೆಳ್ತಂಗಡಿ,,ಜೂ 03(Daijiworld News/MSP): ಮೊಸಳೆ ಮರಿಯೊಂದು ಧರ್ಮಸ್ಥಳ ಸನಿಹದ ದೊಂಡೊಲೆ ಎಂಬ ಪ್ರದೇಶದ ಪಾಳುಬಾವಿಯಲ್ಲಿ ಭಾನುವಾರ ಕಂಡು ಬಂದಿದು ಸ್ಥಳೀಯರು ಆತಂಕಿತರಾಗಿದ್ದಾರೆ.
ನೇತ್ರಾವತಿ ನದಿ ದಡದಲ್ಲಿ ಈ ಪ್ರದೇಶ ಇದ್ದು ಇತ್ತೀಚಿಗೆ ನದಿಯಲ್ಲಿ ನೀರು ಬತ್ತಿದ್ದು ಅದರಿಂದಲೇ ಮೊಸಳೆಗಳು ನೀರನ್ನು ಹುಡುಕಿ ಬಂದಿರಬಹುದು ಎಂದು ಸ್ಥಳಿಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಗೆ ದೂರು ನೀಡಿದ್ದು ಸ್ಥಳಕ್ಕೆ ಆಗಮಿಸಿದ್ದಾರೆ. ಇಲಾಖಾ ಸಿಬ್ಬಂದಿಗಳು ಮೊಸಳೆಯನ್ನು ಸಂರಕ್ಷಿಸಲು ಮುಂದಾಗಿದ್ದು ಸುರಕ್ಷಿತವಾಗಿ ಹಿಡಿಯುವ ಬಗ್ಗೆ ನುರಿತ ಅನುಭವಿಗಳನ್ನು ಕರೆತರಲು ಪ್ರಯತ್ನಿಸುತ್ತಿದ್ದಾರೆ. ಅದಲ್ಲದೆ ಪಿಳಕುಳ ನಿಸರ್ಗದಾಮಕ್ಕೆ ಮಾಹಿತಿ ನೀಡಿ ಅಲ್ಲಿಂದಲೂ ತಜ್ಞರನ್ನು, ಅನುಭವಿಗಳನ್ನು ಕರೆಸುತ್ತಿದ್ದಾರೆ.ಅರಣ್ಯ ಇಲಾಖೆಯವರು ಇದಕ್ಕೆ ಬೇಕಾದ ಆಹಾರವನ್ನು ನೀಡಿದ್ದಾರೆ. ಮೊಸಳೆಯನ್ನು ನೋಡುವುದಕ್ಕೆ ಸ್ಥಳೀಯರು ಬರುತ್ತಿದ್ದು ಇದರಿಂದ ಮೊಸಳೆ ಭಯಗೊಂಡಿರಬಹುದು ಎಂದುಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.