ಕಾಸರಗೋಡು,ಜೂ 03 (Daijiworld News/MSP): ಕಾಸರಗೋಡು ಜಿಲ್ಲೆಯಿ೦ದ ಐಸಿಸ್ ಸೇರಿವರೈಕಿಯಲ್ಲಿ ರಾಶೀದ್ ಅಬ್ದುಲ್ಲ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ತ್ರಿಕ್ಕರಿಪುರ ನಿವಾಸಿಯಾದ ರಾಶಿದ್ ಅಬ್ದುಲ್ಲ ಐಸಿಸ್ ಗೆ ಸೇರ್ಪಡೆಗೊಂಡಿರುವುದಾಗಿ ಕೆಲ ತಿಂಗಳ ಹಿಂದೆ ಸಾಮಜಿಕ ಜಾಲ ತಾಣಗಳಲ್ಲಿ ಸಂದೇಶ ರವಾನಿಸಿದ್ದನು.
ಮೂರು ತಿಂಗಳಿನಿಂದ ಈತನ ಸಂದೇಶ ಬಂದಿಲ್ಲ . ಈತ ರಚಿಸಿದನೆನ್ನಲಾದ ಟೆಲಿಗ್ರಾಂ ಗ್ರೂಪ್ ಕಾರ್ಯಾಚರಿಸುತ್ತಿಲ್ಲ . ಇದರಿಂದ ರಾಶಿದ್ ಅಬ್ದುಲ್ಲ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.
ಅಪಘಾನಿಸ್ತಾನದ ಐಸಿಸ್ ಕೇಂದ್ರಕ್ಕೆ ಅಮೆರಿಕದ ವೈಮಾನಿಕ ದಾಳಿಯಿಂದ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಅಫಘಾನಿಸ್ತಾನದ ಕುರಾಸೆಲ್ ಪ್ರದೇಶದ ಐಸಿಸ್ ಕೇಂದ್ರದಲ್ಲಿದ್ದ ರಾಶೀದ್ ಅಬ್ದುಲ್ಲ ಹಾಗೂ ಇತರರು ಮೂರು ತಿಂಗಳ ಹಿಂದೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಈ ಮೊದಲು ಕೇರಳದಿ೦ದ ಐಸಿಸ್ ಸೇರಿದವರ ಮಾಹಿತಿಗಳನ್ನು ಸಾಮಾಜಿಕ ತಾಣಗಳಲ್ಲಿ ಈತ ಪ್ರಚಾರ ಪಡಿಸುತ್ತಿದ್ದ. ನಿರ೦ತರ ಸಂಬಂಧಿಕರ ಜತೆ ವಾಟ್ಸ್ ಅಪ್ ಸಹಿತ ಸೋಶಿಯಲ್ ಮೀಡಿಯಾಗಳಲ್ಲಿ ಮಾಹಿತಿ ರವಾನಿಸುತ್ತಿದ್ದ ಎಂಬುದಾಗಿ ಎನ್ಐಎ ತನಿಖೆ ವೇಳೆ ತಿಳಿದು ಬಂದಿತ್ತು.