ಧರ್ಮಸ್ಥಳ, ಜೂ 03 (Daijiworld News/MSP): ಧರ್ಮಸ್ಥಳದ ನೇತ್ರಾವತಿ ನದಿ ದಡ ಪ್ರದೇಶ ದೊಂಡೊಲೆಯಲ್ಲಿ ಸಂಜೀವ ಸಪಲ್ಯ ಎಂಬವರ ಜಾಗದಲ್ಲಿರುವ ಪಾಳುಬಾವಿಯಲ್ಲಿ ಭಾನುವಾರ ಮೊಸಳೆಯನ್ನು ಸೋಮವಾರ ಮೂರು ಗಂಟೆಯ ಕಾರ್ಯಾಚರಣೆಯ ಬಳಿಕ ಸೆರೆ ಹಿಡಿಯಲಾಗಿದೆ.
ಭಾರೀ ಗಾತ್ರದ ಮೊಸಳೆಯನ್ನು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ನದಿ ತಟದ ಜನ ಭಯಭೀತರಾಗಿದ್ದಾರು. ಅಲ್ಲದೆ ಬಾವಿಗೆ ಬಿದ್ದಿರುವ ಮೊಸಳೆಯನ್ನು ನೋಡಲು ಭಾರಿ ಸಂಖ್ಯೆಯ ಜನ ಸೇರಿದ್ದರು.
ಸುಮಾರು ಐದೂವರೆ ಅಡಿ ಉದ್ದವಿರುವ ಮೊಸಳೆಯನ್ನು ಅರಣ್ಯಾಧಿಕಾರಿಗಳು, ಸ್ಥಳೀಯರು ಸೇರಿ ಮೇಲೆತ್ತಿ, ಸಮೀಪದ ಚಾರ್ಮಾಡಿ ನದಿಗೆ ಬಿಡಲಾಗಿದೆ. ಮೊಸಳೆಯನ್ನು ಶಾಂತ ಮಾಡಲು ಮೊದಲಿಗೆ ಮೀನು , ಕೋಳಿ ಮುಂತಾದ ಆಹಾರ ನೀಡಿ ಬಳಿಕ ಬಲೆ ಉಪಯೋಗಿಸಿ ಮೊಸಳೆ ಬಾಯಿಗೆ ಹಗ್ಗ ಕಟ್ಟಿ ಮೇಲೆತ್ತಲಾಯಿತು.
ಸ್ಥಳೀಯ ನಿವಾಸಿಗಳಾದ ಜುಬೇರ್, ಸಮೀರ್ ಕಾರ್ಯಾಚರಣೆಗೆ ಸಹಕರಿಸಿದರು. ಉಪವಲಯ ಅರಣ್ಯಾಧಿಕಾರಿ ಶಂಕರ್, ಸುಧಾಕರ್, ಯತೀಂದ್ರ, ಸದಾಶಿವ ಶೆಟ್ಟಿ, ರಾಘವೇಂದ್ರ, ವಿನೋದ್, ಕುಶಾಲಪ್ಪ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.