ಕಾಸರಗೋಡು, ಜೂ 03 (Daijiworld News/MSP): ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎರಡೂವರೆ ವರ್ಷದ ಬಾಲಕಿ ಮೃತಪಟ್ಟ ಘಟನೆ ಕುಂಬಳೆ ಅನಂತಪುರ ಸಮೀಪದ ಪೆರ್ಣೆ ಎಂಬಲ್ಲಿ ಸೋಮವಾರ ನಡೆದಿದೆ.
ಪೆರ್ಣೆಯ ತಿರುಮಲೇಶ್ವರ ಎಂಬವರ ಪುತ್ರಿ ಪ್ರಕೃತಿ ಮೃತಪಟ್ಟ ಬಾಲಕಿ. ಮನೆ ಸಮೀಪದ ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಡಿದು ಬಿದ್ದಿದ್ದ ತಂತಿ ತುಳಿದು ಈ ದುರಂತ ನಡೆದಿದೆ.
ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಗಾಳಿ - ಮಳೆ ಗೆ ಹಲವೆಡೆ ವಿದ್ಯುತ್ ತಂತಿಗಳು ಕಡಿದು ಬಿದ್ದಿದ್ದು , ವಿದ್ಯುತ್ ಸಂಪರ್ಕ ಸಂಪರ್ಕ ಕಡಿತಗೊಂಡಿದೆ