ಮಂಗಳೂರು, ಜೂ 03(Daijiworld News/SM): ಮಂಗಳೂರು ವಿಶ್ವ ವಿದ್ಯಾಲಯಕ್ಕೆ 1 ವರ್ಷದ ಬಳಿಕ ನೂತನ ಉಪ ಕುಲಪತಿಗಳ ಆಯ್ಕೆಯಾಗಿದೆ. ನೂತನ ಉಪಕುಲಪತಿಗಳಾಗಿ ಪಿ.ಎಸ್. ಯಡಪಡಿತ್ತಾಯ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕದ ರಾಜ್ಯಪಾಲ ಹಾಗೂ ವಿವಿ ಕುಲಪತಿಗಳಾಗಿರುವ ವಜೂಬಾಯಿ ವಾಲಾ ಅವರು ಈ ನೇಮಕ ಆದೇಶ ಹೊರಡಿಸಿದ್ದಾರೆ. ನೂತನ ಕುಲಪತಿಗಳು ಜೂನ್ 3ರ ಸೋಮವಾರದಂದು ತಮ್ಮ ಅಧಿಕಾರವನ್ನು ಸ್ವೀಕರಿಸಿದರು.
ಇನ್ನು ಈ ಹಿಂದೆ ಮಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿಗಳಾಗಿದ್ದ ಪ್ರೋ. ಕೆ. ಬೈರಪ್ಪ 2018ರ ಜೂನ್ 4ರಂದು ನಿವೃತ್ತಿ ಹೊಂದಿದ್ದರು.
ಬಳಿಕ ಆ ಸ್ಥಾನಕ್ಕೆ ವಿವಿಯ ದೈಹಿಕ ಶಿಕ್ಷಣ ವಿಭಾಗದ ಡಾ. ಕಿಶೋರ್ ಕುಮಾರ್ ಸಿ.ಕೆ. ಅವರನ್ನು ನೇಮಕ ಮಾಡಲಾಗಿತ್ತು. ಅವರ ಅವಧಿಯ ಬಳಿಕ ವಾಣಿಜ್ಯ ವಿಭಾಗದ ಪ್ರೋ. ಈಶ್ವರ ಪಿ. ಅವರನ್ನು ನೇಮಕ ಮಾಡಲಾಯಿತು. ಅವರ ಅವಧಿಯ ಮುಗಿದ ನಂತರ, ಫ್ರೊ. ಕಿಶೋರಿ ನಾಯಕ್ ಕೆ ಅವರನ್ನು ನೇಮಕ ಮಾಡಲಾಯಿತು. ಇವರ ಅವಧಿ ಮುಗಿದ ಬಳಿಕ ಮೂರು ಬಾರಿ ಅವರನ್ನೇ ಉಪಕುಲಪತಿ ಸ್ಥಾನದಲ್ಲಿ ಮುಂದೂಡಲಾಗಿತ್ತು.
ಇದೀಗ ಅಂತಿಮವಾಗಿ ನೂತನ ಉಪಕುಲಪತಿಗಳನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ನೀಡಿದ್ದು, ಪಿ.ಎಸ್. ಯಡಪಡಿತ್ತಾಯ ಅವರು ಅಧಿಕಾರಿ ಸ್ವೀಕರಿಸಿದ್ದಾರೆ.