ಮಂಗಳೂರು, ಜೂ 4 Daijiworld News/MSP): ಮುಸ್ಲಿಂ ಸಮುದಾಯ ಒಂದು ತಿಂಗಳ ಕಠಿಣ ರಂಜಾನ್ ಉಪವಾಸ ವೃತವನ್ನು ಆಚರಿಸಿ ಇದೀಗ ರಂಜಾನ್ ಹಬ್ಬದ ತಯಾರಿಗೆ ಸಿದ್ಧತೆ ಬಲು ಜೋರಾಗಿ ನಡೆಸುತ್ತಿದ್ದಾರೆ. ನಗರಾದ್ಯಂತ ರಂಜಾನ್ ಹಬ್ಬದ ಸಡಗರ ಸಂಭ್ರಮದ ಮನೆ ಮಾಡಿದ್ದು, ಹಬ್ಬದ ಸಿದ್ಧತೆಗೆ ವಸ್ತುಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ. ರಂಜಾನ್ ಹಬ್ಬದಲ್ಲಿ ಟೋಪಿ, ಹೊಸಬಟ್ಟೆ, ಸುಗಂಧ ದೃವ್ಯಗಳಿಗೆ ವಿಶೇಷ ಬೇಡಿಕೆ ಇದೆ.
ಇದಕ್ಕಲ್ಲದೆ ಮೆಹಂದಿ , ಓಣ ಹಣ್ಣುಗಳಾದ ಖರ್ಜೂರ್, ದಾಕ್ಷಿ, ಅಕ್ರೋಟ್, ಚಾರೋಲಿ ಹಾಗೂ ಶಾವಿಗೆ ಸೇರಿದಂತೆ ಖರೀದಿ ಮಾಡುವಲ್ಲಿ ಗ್ರಾಹಕರು ಅಂಗಡಿ ಮುಂಗಟ್ಟುಗಳಿಗೆ ಮುಗಿಬೀಳುತ್ತಿದ್ದಾರೆ. ಇದಲ್ಲದೆ ನಗರ ಮಾಲ್ ಗಳು ಕೂಡಾ ರಂಜಾನ್ ಗಾಗಿ ವಿಶೇಷ ಆಫರ್ ಗಳನ್ನು ನೀಡಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ಜತೆಗೆ ಪಾದರಕ್ಷೆ, ಪಿಂಗಾಣಿ ಸಾಮಾಗ್ರಿಗಳು, ಅಲಂಕಾರಿಕ ವಸ್ತುಗಳು, ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಖರೀದಿಸಬಹುದಾದ ದಿನ ಬಳಕೆ ವಸ್ತುಗಳು ಗ್ರಾಹಕರನ್ನು ಸೆಳೆಯುತ್ತಿವೆ. ರಂಜಾನ್ ಹಬ್ಬದ ನಿಮಿತ್ತ ನಾಳೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.