ಬಂಟ್ವಾಳ, ನ.03(DaijiworldNews/AK): ಸಾಮರಸ್ಯ ವೇದಿಕೆ ಅನಂತಾಡಿ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ತುಡರ್ ಕಾರ್ಯಕ್ರಮವು ಶನಿವಾರ ರಾತ್ರಿ ಅನಂತಾಡಿಯಲ್ಲಿ ನಡೆಯಿತು. ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರ ದಿವ್ಯ ಹಸ್ತದಿಂದ ನೀಡಲ್ಪಟ್ಟ ಸಾಮರಸ್ಯ ಜ್ಯೋತಿ (ದೀಪ)ಯನ್ನು ಅನಂತಾಡಿಯ ರಾಜರಸ್ತೆಯಲ್ಲಿ ಮಂಗಳವಾದ್ಯದೊಂದಿಗೆ ಗೋಳಿಕಟ್ಟೆವರೆಗೆ ತಂದು ರಸ್ತೆಯುದ್ದಕ್ಕೂ ಹಿಂದೂ ಮನೆಗಳಿಗೆ ಜ್ಯೋತಿ ನೀಡಿ ದೀಪಾವಳಿ ಆಚರಿಸಲಾಯಿತು.
ಜೊತೆಗೆ "ಹಿಂದೂ ಸಾಮಾಜಿಕ ಸಾಮರಸ್ಯ" ಬೆಸೆಯುವ ಉಧಾತ್ತ ಚಿಂತನೆಯ "ತುಡರ್" ಹಬ್ಬವನ್ನು ಅನಂತಾಡಿ ಕೂಡುರಸ್ತ ದುಗ್ಗಪ್ಪ ನಲಿಕೆಯವರ ಮನೆಯಲ್ಲಿ ನಡೆಸಲಾಯಿತು. ಗೋ ಪೂಜನಾ, ದೀಪಾವಳಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಹಕಾರ್ಯವಾಹ ಶ್ರೀ ಸುಭಾಷ್ ಚಂದ್ರ ಸುಳ್ಯ(ಕಳೆಂಜ ) ಬೌದ್ಧಿಕ ನಡೆಸಿಕೊಟ್ಟರು. ಮಂಗಳೂರು ಗ್ರಾಮಾಂತರ ಜಿಲ್ಲಾ ಸಾಮರಸ್ಯ ಸಂಯೋಜಕರಾದ ಯೋಗೀಶ ಮಾಣಿ, ಅಣ್ಣು ಕೂಡುರಸ್ತೆ, ದುಗ್ಗಪ್ಪ ಕೂಡುರಸ್ತೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಮರಸ್ಯ ವೇದಿಕೆ ಅನಂತಾಡಿ ಉಸ್ತುವಾರಿ ಸನತ್ ಕುಮಾರ್ ,ಸಾಮರಸ್ಯ ವೇದಿಕೆ ಪ್ರಮುಖ ದಿನೇಶ್ ಪಿಲಿಚಂಡಿಗುಡ್ಡ, ನಾಗೇಶ್ ಕರಿಂಕ, ನೇರಳಕಟ್ಟೆ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ತನಿಯಪ್ಪ , ಕೃಷ್ಣಪ್ಪನಿಡ್ಯಾರ , ಕುಂಞಣ್ಣ , ರಮೇಶ್ ಮಠದಮೂಲೆ, ಶ್ರೀ ದೇವಿ ಸೇವಾ ಟ್ರಸ್ಟ್ ಅಧ್ಯಕ್ಷ ಆನಂದ ಪಿಲಿಚಂಡಿಗುಡ್ಡ, ಶ್ರೀಮತಿ ಜ್ಯೋತಿ ನಾಗರಾಜ , ಮಹಾಬಲ, ನೇ.ವ್ಯ.ಸ.ಸಂ.ನೇರಳಕಟ್ಟೆ ನಿರ್ದೇಶಕ ವೆಂಕಟೇಶ , ಶಿವಕುಮಾರ್ , ಶಿವರಾಮ ಕರಿಂಕ, ಸಂತೋಷ್ ಪಿಲಿಚಂಡಿಗುಡ್ಡ, ಕಿರಣ್ ಗೋಳಿಕಟ್ಚೆ, ಡೊಂಬಯ ,ಪೂವಪ್ಪ ಒಡ್ತೇಲು, ನಾರಾಯಣ ಕೂಡುರಸ್ತೆ, ಗಂಗಾಧರ ಬಾಬಣಕಟ್ಟೆ,ಬಾಲಕೃಷ್ಣ ಮುಜಾಲ, ರಾಘವ, ಶಂಕರ ಅನಂತಾಡಿ, ಸತೀಶ್ ಕೂಡುರಸ್ತೆ,, ಸುರೇಶ್ ಬಂಟ್ರಿಂಜ ಹಾಗೂ ದುಗ್ಗಣ್ಣ ಕೂಡುರಸ್ತೆಯವರ ಮನೆಯವರು,ಕುಟುಂಬಸ್ಥರು ಭಾಗವಹಿಸಿದರು.