ಕಾಸರಗೋಡು, ನ.03(DaijiworldNews/AK):ನೀಲೇಶ್ವರ ವಿರಾರ್ ಕಾವ್ ದೈವಸ್ಥಾನದ ಕಳಿ ಯಾಟ ಮಹೋತ್ಸವ ದ ಸಂದರ್ಭದಲ್ಲಿ ಸುಡುಮದ್ದು ಸ್ಫೋಟ ದ ಲ್ಲಿ ಬಲಿ ಯಾದವರ ಸಂಖ್ಯೆ ಎರಡಕ್ಕೇರಿದೆ.ಗಂಭೀರ ಸ್ಥಿತಿಯಲ್ಲಿ ಕೋಜಿ ಕ್ಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರತೀಶ್ ( 32) ಎಂಬವರು ರವಿವಾರ ಮೃತಪಟ್ಟಿದ್ದಾರೆ. ತುರ್ತು ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದ. ಕರಿಂದಳ ಕಿನಾನೂರಿನ ಸಂದೀಪ್ (38) ಶನಿವಾರ ಸಂಜೆ ಮೃತಪಟ್ಟಿದ್ದರು.ಗಂಭೀರ ಸ್ಥಿತಿಯಲ್ಲಿ ಕೋಜಿ ಕ್ಕೋ ಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸ್ಫೋಟದಲ್ಲಿ ಒಟ್ಟು 154 ಮಂದಿ ಗಾಯ ಗೊಂಡಿದ್ದರು. ಈ ಪೈಕಿ 97 ಮಂದಿ ಈಗಲೂ ವಿವಿಧ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 7 ಮಂದಿಯ ಸ್ಥಿತಿ ಗಂಭೀರ ವಾಗಿದೆ.