ಮಂಗಳೂರು, ನ.05(DaijiworldNews/AK): ಸಂಘೇ ಶಕ್ತಿ ಕಲವ್ ಯುಗೇ ಕಲಿಯುಗದಲ್ಲಿ ಸಂಘಶಕ್ತಿಯಿಂದ ಸರ್ವವೂ ಸಾಧ್ಯ. ಬಲಿಷ್ಠ ಸೌಹಾರ್ದ ಸಂಘಟನೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ ಎಂಬುದಕ್ಕೆ ಇಲ್ಲಿನ ಭಜನಾ ಮಂದಿರ ,ಮಾತೃ ಮಂಡಳಿ, ಯುವ ಸಂಘಟನೆ, ಯಕ್ಷಗಾನ ಸಂಘಟನೆ, ಮಂದಿರ ಟ್ರಸ್ಟ್ ಒಂದು ಉದಾಹರಣೆ ಎಂದು ಖ್ಯಾತ ನ್ಯಾಯವಾದಿ ರಾಮ್ ಪ್ರಸಾದ್ ಇವರು, ಶ್ರೀ ಧರ್ಮಶಾಸ್ತ್ರ ಮಂದಿರ ಟ್ರಸ್ಟ್( ರಿ) ಇದರ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರಾದ ಭಾಸ್ಕರ್ ಕೆ. ಇವರು ಸಂಸ್ಥೆಯ ಸಾಧನೆಯನ್ನು ಬಣ್ಣಿಸಿದರು. ಕಿರಣ್ ಶೆಟ್ಟಿ ಹೊಸಲಕ್ಕಿ ಗ್ರಾಮ ಪಂಚಾಯತ್ ಸದಸ್ಯರು ಮೂಡುಶೆಡ್ಡೆ, ಉದ್ಯಮಿ ಶ್ರೀ ಜಯರಾಮ ಇವರು ಶುಭ ಹಾರೈಸಿದರು.
ಸೇವಾ ಸಮಿತಿಯ ಅಧ್ಯಕ್ಷರಾದರಮೇಶ್ ಮೂಡುಶೆಡ್ಡೆಯವರು ಪ್ರಾಸ್ತಾವಿಕ ಮಾತನಾಡಿದರು. ಮಾತೃ ಮಂಡಳಿಯ ಅಧ್ಯಕ್ಷೆ ಹರಿಣಾಕ್ಷಿ, ಗೌರವ ಅಧ್ಯಕ್ಷರಾದ ಕೂಸಪ್ಪ ಪಾಲ್ದನೆ, ರಘುರಾಮ ಅಮಿನ್ ಉಪಸ್ಥಿತರಿದ್ದರು.ಹಿರಿಯರಾದ ಮಾಧವ ಕುಲಾಲ್, ಸತೀಶ್ ಗುರುಸ್ವಾಮಿ ಇವರನ್ನು ಸನ್ಮಾನಿಸಲಾಯಿತು.
ಶಾಶ್ವತ ಸದಸ್ಯರ ಮಕ್ಕಳಲ್ಲಿ SSLC, PUC ಯಲ್ಲಿ 85% ಮೇಲೆ ಅಂಕ ತೆಗೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಸಂಸ್ಕೃತಿಕ ಸಿಂಚನದ ಸ್ಪರ್ಧೆಯಲ್ಲಿ ಸ್ಪರ್ದಾಳುಗಳಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕುಮಾರಿ ವರ್ಷ, ಮನೀಷ, ಅನನ್ಯ ಪ್ರಾರ್ಥಿಸಿದರು, ಮಹಾಲಿಂಗೇಶ್ವರ ಭಟ್ ಇವರು ಸ್ವಾಗತಿಸಿದರು, ಅಶೋಕ್ ಇವರು ವಂದಿಸಿದರು.ಪ್ರವೀಣ್ ಮೂಡುಶೆಡ್ಡೆ ನಿರೂಪಿಸಿದರು.ತದನಂತರ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಸ್ಥೆಯ ಕಲಾವಿದರಿಂದ ತುಳು ಹಾಸ್ಯಮಯ ನಾಟಕ ಸಂಪನ್ನಗೊಂಡಿತು.