ಕಿನ್ನಿಗೋಳಿ, ನ.06(DaijiworldNews/AK):ಮಕ್ಕಳಲ್ಲಿ ಆತ್ಮರಕ್ಷಣೆ ಕಲಿಕೆಯು ಹೆಚ್ಚಾಗುತ್ತಿದ್ದು ಮಕ್ಕಳಲ್ಲಿ ಅರಿವು ಮೂಡಿಸುವುದು ಬಹು ಪ್ರಮುಖವಾದದ್ದು ಅದರಲ್ಲಿಯೂ ಕರಾಟೆ ಅಂತಹ ಆತ್ಮರಕ್ಷಣೆ ಕಲಿಕೆ ಬಹಳಷ್ಟು ಜನರು ಕಲಿಯುತ್ತಿದ್ದು ಆದರೆ ಕರಾಟೆ ಸ್ಪರ್ಧೆಯಲ್ಲಿ ಪಾಲು ಪಡೆಯುವುದು ಅತಿ ಕಡಿಮೆ.
ಕರಾಟೆಯಲ್ಲಿ ಸ್ಪರ್ಧಿಸಿ ಬಹಳಷ್ಟು ಪದಕಗಳನ್ನು ತಂದು ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ ಕಿನ್ನಿಗೋಳಿಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ .ಕರಾಟೆ ಸ್ಪ ರ್ದಿಯಲ್ಲಿ ಊರಿಗೆ ಕೀರ್ತಿ ತಂದಿದ್ದಾಳೆ. ಆತ್ಮರಕ್ಷಣೆ ಯಾದ ಕರಾಟೆಯ ಮೂಲಕ ಸಾಧನೆಯನ್ನ ಮಾಡಬಹುದೆಂದು ತೋರಿಸಿಕೊಟ್ಟಿದ್ದಾಳೆ. ಕಿನ್ನಿಗೋಳಿ ಸಮೀಪದ ಪದ್ಮನೂರು ನಿವಾಸಿ ರಮೇಶ್ ಹಾಗು ಕುಸುಮ ದಂಪತಿಯ ದ್ವಿತೀಯ ಪುತ್ರಿ ಕೃತಿ ಆರ್ ಕುಲಾಲ್.
ಕೃತಿ ಆರ್ ಕುಲಾಲ್ ಅವರು ಎಂಟು ವರ್ಷದ ಬಾಲಕಿ ಮೂರನೇ ತರಗತಿಯಲ್ಲಿ ಕಲಿಯುದಿದ್ದ ಸಂದರ್ಭ ಕರಾಟೆ ತರಬೇತಿಗೆ ಹೋಗಲು ಆರಂಭಿಸಲಾಗಿತ್ತು. ಆರಂಭದ ವರ್ಷದಲ್ಲೇ ಸ್ಪರ್ಧೆಗೆ ಹೋಗಿ ಎರಡು ಬಂಗಾರದ ಪದಕಗಳು ತಂದಿದ್ದು ಕಳೆದ ಆರು ವರ್ಷಗಳಿಂದ ಸತತವಾಗಿ ಸ್ಪರ್ಧೆಗೆ ಹೋಗಿ ಸರಿಸುಮಾರು ೨೨ ಬಂಗಾರದ ಪದಕಗಳು ಹಾಗೂ ೨ ಬೆಳ್ಳಿಯ ಪದಕಗಳು ಗೆದ್ದಿದ್ದಾಳೆ.
ಈ ವರ್ಷ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಮಂಗಳೂರು ಇವರು ನಡೆಸಿದ ದಿನಾಂಕ 8/8/2024 ರಂದು ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆ ಇಲ್ಲಿ ನಡೆದಿರುವ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ರೋಟರಿ ಶಾಲೆಯನ್ನು ಪ್ರತಿನಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಸೆ. 25/09/2024 ರಂದು ಎಸ್.ಡಿ.ಎಮ್ ಮಂಗಳಜ್ಯೋತಿ ವಾಮಂಜೂರು, ಮಂಗಳೂರು ಇಲ್ಲಿ ನಡೆದ ಜಿಲ್ಲಾಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ
ಡಿಪಾರ್ಟ್ಮೆಂಟ್ ಕರಾಟೆಯಲ್ಲಿ 2022, 2023, ಹಾಗೂ 2024 ಸತತ ಈ ಮೂರು ವರ್ಷಗಳಲ್ಲಿ ಪ್ರಥಮ ಸ್ಥಾನ ಪಡೆದು "ಹ್ಯಾಟ್ರಿಕ್ ಸಾಧನೆ" ಮಾಡಿ ಶಾಲೆಗೆ, ಕರಾಟೆ ಗುರುಗಳಿಗೆ, ಊರಿಗೆ ಅಲ್ಲದೆ ಹೆತ್ತವರಿಗೆ ಹೆಸರು ತಂದಕೊಟ್ಟ ಕೃತಿಯ ಸಾಧನೆ ಮೆಚ್ಚುವಂಥದ್ದು.
ಈಗಾಗಲೇ ಮೂರು ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆದಿರುತ್ತಾಳೆ. ಈ ಪ್ರತಿಭೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕರು ಅಲ್ಲದೆ ಕರಾಟೆ ಶಿಕ್ಷಕರು ಹಾಗೂ ಹೆತ್ತವರು ಸಂಪೂರ್ಣ ಸಹಕಾರ ನೀಡಿದ್ದಾರೆ.
6/9/2024 ರಂದು ಸೆಲ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೋಜೊ ಇವರು ಕೊಡೆರಾಲ್ ಚರ್ಚ್ ಮಂಗಳೂರಿನಲ್ಲಿ ನಡೆಸಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ
ಕರಾಟೆ ಶಿಕ್ಷಕರದ ಈಶ್ವರ್ ಕಟೀಲ್, ನಾಗರಾಜ್ ಕುಲಾಲ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾಳೆ ಹಾಗೂ ಮೋರ್ಗನ್ ವಿಲಿಯಂ, ಚಂದ್ರಹಾಸ ಅಂಚನ್ ಅಲ್ಲದೆ ಸಹೋದರಿ ಬಹುಮುಖ ಪ್ರತಿಭೆ ದೃತಿ ಆರ್ ಕುಲಾಲ್ ಇವರಿಂದ ತರಬೇತಿನ್ನ ಪಡೆಯುತ್ತಿದ್ದಾಳೆ .
ನಾನು ಎಂಟು ವರ್ಷದ ಬಾಲಕಿ ಮೂರನೇ ತರಗತಿಯಲ್ಲಿ ಕಲಿಯುದಿದ್ದ ಸಂದರ್ಭದಲ್ಲಿ ನಾನು ನನ್ನ ಅಕ್ಕನ ಜೊತೆ ಕರಾಟೆ ತರಬೇತಿಗೆ ಹೋಗಲು ಆರಂಭಿಸಿದು ನನ್ನ ಅಕ್ಕ ಕರಟೆಯಲ್ಲಿ ಸರಿಸುಮಾರು ೪೨ ಪದಕಗಳನ್ನು ಗೆದ್ದಿದ್ದು ನನಗೆ ಸ್ಪೂರ್ತಿಯಾಗಿದ್ದಾಳೆ ಹಾಗೇನೇ ನನಗೆ ಅಕ್ಕ ತರನೇ ನನಗೂ ಕರಟೇಯಲ್ಲಿ ಸ್ಪರ್ದಿಸಿ ಪದಕಗಳು ಗೆಲ್ಲಬೇಕೆಂಬ ಉದ್ದೇಶ ಕೇವಲ ಕರಾಟೆ ಮಾತ್ರವಲ್ಲದೆ ಭರತನಾಟ್ಯ ಮತ್ತು ವಾಲಿಬಾಲ್, ತ್ರೋಬಾಲ್ ಪ್ರತಿಭಾ ಕಾರಂಜಿ ಸಂಗೀತ ಸ್ಪರ್ಧೆ ಮತ್ತಿತರ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಪಡೆದಿದ್ದೇನೆ.
ತಂದೆ ತಾಯಿ ಮತ್ತು ನನ್ನ ಅಕ್ಕನ ಸಹಕಾರ ಇತ್ತು ಹಾಗೂ ನಮ್ಮ ಊರಿನ ಸಜ್ಜನ ದಾನಿಗಳ ಸಹಾಯದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಯಿತು ಆದುದರಿಂದ ನನ್ನ ಈ ಪ್ರತಿಭೆಗೆ ಸಹಕಾರ ಮಾಡಿದ ಸಜ್ಜನ ಬಂಧುಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು
-ಕೃತಿ ಆರ್ ಕುಲಾಲ್ ಕರಾಟೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಪರ್ದಿ:
ಎಲ್ಲಾ ತರದ ಸಹಕಾರಗಳನ್ನು ಅವಳಿಗೆ ನೀಡುತ್ತಾ ಬಂದಿದ್ದೇವೆ, ಶಿಕ್ಷಣ ಮತ್ತು ಅವಳ ಪ್ರತಿಭೆ ಗಮನಿಸಿ ನಮ್ಮ ಊರಿನ ದಾನಿಗಳು ತಾವಾಗಿಯೇ ಅವಳಿಗೆ ಸಹಾಯ ಮಾಡಿದ್ದಾರೆ ಹಾಗೂ ಶಾಲೆಯ ಸಹಕಾರದಿಂದ ಇಷ್ಟು ಎತ್ತರಕ್ಕೆ ಸಾಧನೆ ಮಾಡಲು ಸಾಧ್ಯವಾಯಿತು.