ಉಡುಪಿ, ನ.07(DaijiworldNews/AA): ಕಾರ್ಕಳ ತಾಲೂಕಿನ ಕಲ್ಯ ಗ್ರಾಮದ ಗುಳಿಗ ದೈವದ ಗುಡಿಯ ಸಮೀಪ ಚಿರತೆಯ ಮರಿಯೊಂದು ಅವಿತು ಕುಳಿತಿದ್ದ ಘಟನೆ ನಡೆದಿದೆ.
ತಾಯಿಯಿಂದ ಬೇರ್ಪಟ್ಟು ಅಸಹಾಯಕವಾಗಿದ್ದ ಚಿರತೆ ಮರಿಯನ್ನು ಮೊದಲು ಸ್ಥಳೀಯರು ಗಮನಿಸಿದ್ದಾರೆ. ಈ ಚಿರತೆ ಮರಿಯು ಕಲ್ಯ ಗ್ರಾಮದ ಪಡುಮನೆ ಶ್ರೀ ಲಕ್ಷ್ಮಣ ಶೆಟ್ಟಿ ಇವರ ಜಾಗದಲ್ಲಿ ಕಂಡುಬಂದಿದೆ.
ಬಳಿಕ ಅರಣ್ಯ ಇಲಾಖೆಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಘುಪತಿ ಪೂಜಾರಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಪುಟ್ಟ ಚರಿತ್ರೆ ಮರಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.