ಕುಂದಾಪುರ , ನ.09(DaijiworldNews/AK): ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ, ಉರಿಯದ ದೀಪ, ಹೊಂಡ ಗುಂಡಿಗಳಿಂದ ವಾಹನ ಸವಾರರಿಗೆ ಪಾದಾಚಾರಿ ಸಮಸ್ಯೆ, ಸ್ಥಳೀಯ ಸಂಘ ಸಂಸ್ಥೆ ಸೇರಿದಂತೆ ಇತರ ವಾಹನಗಳಿಗೆ ವಿಧಿಸುತ್ತಿರುವ ಸುಂಕ. ಇವೆಲ್ಲವನ್ನೂ ಖಂಡಿಸಿ ಶನಿವಾರ ಸಾಸ್ತಾನ ಟೋಲ್ಗೆ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
https://daijiworld.ap-south-1.linodeobjects.com/Linode/images3/toll091124_24.jpg>
ಈ ಸಂದರ್ಭದಲ್ಲಿ ಮಾತನಾಡಿದ ರಾ.ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ಸಂಸ್ಥೆಗಳ ಹೆಸರಿನಲ್ಲಿ ನೋಂದಾವಣಿ ಆಗಿರುವ ವಾಹನಗಳಿಗೆ ಟೋಲ್ ಸುಂಕ ವಸೂಲಾತಿ ನಡೆಯುತ್ತಿದೆ. ಹಲವು ಬಾರಿ ಸ್ಥಳಿಯ ಶಾಲಾ ವಾಹನಗಳು ಟೋಲ್ನಲ್ಲಿ ಸಮಯ ವ್ಯರ್ಥಗೊಳಿಸುತ್ತಿದ್ದಾರೆ ಇದರಿಂದ ಶಾಲಾ ಮಕ್ಕಳಿಗೆ ಮಾನಸಿಕವಾಗಿ ಸಾಕಷ್ಟು ಹಿಂಸೆಯಾಗುತ್ತದೆ. ಹೀಗೆ ಮುಂದುವರಿದರೆ ಕಮರ್ಶಿಯಲ್ ವಾಹನಗಳಿಗೂ ಟೋಲ್ ವಿಧಿಸುತ್ತಾರೆ. ಇದು ಅವರ ತಂತ್ರವಾಗಿದ್ದು, ಹಂತ ಹಂತವಾಗಿ ಟೋಲ್ ಸಂಗ್ರಹಣೆ ಆರಂಭಿಸುವುದು ಅವರ ಗುರಿಯಾಗಿದೆ. ಇಷ್ಟಲ್ಲದೆ ಸಾಸ್ತಾನದಿಂದ ಕುಂದಾಪುರಕ್ಕೆ ತೆರಳುವ ಮಾರ್ಗವೆನ್ನವುದು ಹೊಂಡಮಯವಾಗಿದೆ. ಪಾದಾಚಾರಿ ಮಾರ್ಗಗಳಲ್ಲಿ ಬೃಹತ್ ಹೊಂಡಗಳಿಂದ ಸಾವು ನೋವು ಸಂಭವಿಸುತ್ತಿದೆ. ಬೀದಿ ದೀಪಗಳು ಸಮರ್ಪಕವಾಗಿ ಉರಿಯುತ್ತಿಲ್ಲ.ಈ ಎಲ್ಲಾ ಸಮಸ್ಯೆಗಳನ್ನು ಇಟ್ಟುಕೊಂಡು ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ.
ಇದು ಕಂಪೆನಿ ಸರ್ಕಾರವಲ್ಲ. ಪ್ರಜಾಪ್ರಭುತ್ವ ಎನ್ನುವುದು ನೆನಪಿರಲಿ ಎಂದು ಆಕ್ರೋಶ ಹೊರಹಾಕಿದ ಸಮಿತಿಯ ಅಧ್ಯಕ್ಷರು ನಮ್ಮ ಬೇಡಿಕೆಯಾಗಿ ಸ್ಥಳೀಯ ಜಿ.ಪಂ ಎಲ್ಲಾ ವಾಹನಗಳಿಗೆ ಈ ಹಿಂದೆ ವಿನಾಯ್ತಿ ನೀಡಲಾಗಿದೆ ಅದರಂತೆ ನಡೆದುಕೊಳ್ಳಲಿ,ರಸ್ತೆ ದುರಸ್ಥಿ ಸಮರ್ಪಕವಾಗಿ ಕಾಲಕಾಲಕ್ಕೆ ಅನುಗುಣವಾಗಿ ಮಾಡಬೇಕು,ದಾರಿದೀಪ ರಿಪೇರಿಯಾಗಬೇಕು,ಸಮರ್ಪಕ ಸರ್ವಿಸ್ ರಸ್ತೆ ನಿರ್ಮಾಣ ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆ ಆಗದಂತೆ ಕ್ರಮ,,ರಸ್ತೆ ಬದಿ ಮಣ್ಣು ಹಾಕಿಸಿ, ಜನಸಾಮಾನ್ಯರಿಗೆ ಸಂಚರಿಸಲು ಯೋಗ್ಯಗೊಳಿಸುವುದು,ಟೋಲ್ ಪ್ಲಾಜಾ ಬಳಿ ಬಾರಿ ಗಾತ್ರದ ವಾಹನ ನಿಲ್ಲದಂತೆ ಕ್ರಮ ವಹಿಸುವುದು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಪೋಲಿಸ್ ಮಧ್ಯಸ್ಥಿಕೆ
ಟೋಲ್ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಬ್ರಹಾವರ ಸರ್ಕಲ್ ದಿವಾಕರ್ ಮಧ್ಯಸ್ಥಿಕೆ ವಹಿಸಿ ಟೋಲ್ ಕಂಪನಿಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ತಾಳಿ ಗೊಳಿಸಿದರು.
ಸೋಮವಾರ ಮತ್ತೆ ಸಭೆ
ಟೋಲ್ ಕಂಪನಿಯ ಸಿಬ್ಬಂದಿಗಳ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶಗೊಂಡ ಸಮಿತಿ ಹಾಗೂ ಪ್ರತಿಭಟನಾಕಾರರನ್ನು ಪೋಲಿಸ್ ಇಲಾಖೆ ಮಧ್ಯಸ್ಥಿಕೆಯೊಂದಿಗೆ ತಿಳಿಗೊಳಿಸಿತ್ತಾದ್ದರೂ ಟೋಲ್ ಮುಖ್ಯಸ್ಥರೊಂದಿಗೆ ಬ್ರಹ್ಮಾವರದ ಸರ್ಕಲ್ ದಿವಾಕರ್ ಮಾತುಕತೆ ನಡೆಸಿ ಸೋಮವಾರ ತಹಶಿಲ್ದಾರರ್ ಕಛೇರಿಯಲ್ಲಿ ಸಭೆ ಆಯೋಜಿಸಲು ತಿರ್ಮಾಸಿ ಹೆದ್ದಾರಿ ಸಮಿತಿಗೆ ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ಪ್ರತಿಬಾರಿ ಟೋಲ್ ಇನ್ನಿತರ ಸಮಸ್ಯೆಗಳನ್ನು ಸೃಷ್ಠಿಸಿ ಹೆದ್ದಾರಿ ಸಮಿತಿ ಹಾಗೂ ಜನಸಾಮಾನ್ಯರಿಗೆ ತೊಂದರೆಕೊಡುತ್ತಿದ್ದಿರಿ ಇದೇ ರೀತಿ ಮುಂದುವರೆದರೆ ಟೋಲ್ ಗೇಟ್ ಗೆ ಮುಕ್ತಿಗಾಣಿಸಲಿದ್ದೇವೆ ಎಂದು ಜಾಗೃತಿ ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಎಚ್ಚರಿಕೆಯ ಕರೆಗಂಟೆ ನೀಡಿದರು.ಈ ಸಂದರ್ಭದಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರು,ವಾಹನ ಚಾಲಕರು ಮತ್ತಿತರರು ಇದ್ದರು.