ಮಂಗಳೂರು, ನ.10(DaijiworldNews/AA): ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು, ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಇಂದು ನಡೆಯಿತು.
ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನಲ್ಲಿ ಸುಮಾರು 16 ವರ್ಷಗಳಿಂದ ಗೆಲುವು ಸಾಧಿಸಿಕೊಂಡು ಬಂದಿರುವ ವಿದ್ಯಾರ್ಥಿ ಪರಿಷತ್ ಇಂದು ಕೂಡ ಗೆಲುವಿನ ನಗೆ ಬೀರಿದೆ, ಕಳೆದ ಮೂರು ವರ್ಷಗಳಿಂದ 32 ತರಗತಿ ಅಭ್ಯರ್ಥಿಗಳಲ್ಲಿ ಗೆಲುವು ಸಾಧಿಸಿಕೊಂಡು ಬಂದಿದ್ದು ಈ ಬಾರಿ 33 ಸ್ಥಾನಗಳಲ್ಲಿ 33 ಸ್ಥಾನಗಳನ್ನು ಕೂಡಾ ವಿದ್ಯಾರ್ಥಿ ಪರಿಷತ್ ಪರವಾಗಿ ಗೆದ್ದು ಕೊಂಡಿದೆ.
ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಸಾತ್ವಿಕ್, ಕಾರ್ಯದರ್ಶಿಯಾಗಿ ಕೀರ್ತನ್, ಸಹ ಕಾರ್ಯದರ್ಶಿಯಾಗಿ ನಂದಿತಾ ಎಸ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂಜಾ ಶೆಟ್ಟಿ, ಸಾಂಸ್ಕೃತಿಕ ಸಹ ಕಾರ್ಯದರ್ಶಿಯಾಗಿ ಅನನ್ಯ ಇವರುಗಳು ಜವಾಬ್ದಾರಿ ಸ್ವೀಕರಿಸಿದರು. ಚುನಾವಣಾ ಪ್ರಕ್ರಿಯೆಯ ನಂತರದಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ತರಗತಿ ನಾಯಕರುಗಳು ಸೇರಿ ಮಂಗಳೂರಿನ ಪ್ರಮುಖ ಬೀದಿಗಳಲ್ಲಿ ವಿಜಯಾತ್ರೆ ನಡೆಸಿ ಮೆರವಣಿಗೆ ಪುರಭವನದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಮಂಗಳೂರು ಜಿಲ್ಲಾ ಸಹ ಸಂಚಾಲಕರಾದ ಪ್ರತೀಕ್ ಬಂಟ್ವಾಳ, ಮಂಗಳೂರು ಮಹಾನಗರ ಕಾರ್ಯದರ್ಶಿಗಳಾದ ಮೋನಿಶ್ ತುಮಿ ನಾಡು ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಮರಾಠಿ ಮತ್ತು ವಿದ್ಯಾರ್ಥಿನಿ ವಿಸ್ತಾರಕ್ ಆದ ಶ್ರೀ ಲಕ್ಷ್ಮೀ ಹಾಗೂ ಮಂಗಳಗೌರಿ ಯು.ಸಿ.ಎಂ ಕಾಲೇಜು ಘಟಕದ ಅಧ್ಯಕ್ಷ ನಿಖಿತ್ ಹಾಗೂ ಶಾಶಂಕ್, ಹಿತೇಶ್ ಮತ್ತು ಮಂಗಳೂರು ಮಹಾನಗರದ ಪ್ರಮುಖರು ಉಪಸ್ಥಿತರಿದ್ದರು.