ಮಂಗಳೂರು,ನ.11(DaijiworldNews/TA):ಮಾರುತಿ 800 ಕಾರ್ ಹಠಾತ್ ಬೆಂಕಿ ಹತ್ತಿಕೊಂಡ ಘಟನೆ ಆದಿತ್ಯವಾರ ಅಪರಾಹ್ನ ಮಂಗಳೂರಿನ ಲೇಡಿಹಿಲ್ ನ ಪೆಟ್ರೋಲ್ ಪಂಪ್ ಎದುರು ಸಂಭವಿಸಿದೆ. ಕಾರಿನಲ್ಲಿದ್ದ ಮೂವರೂ ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ರಸ್ತೆಯ ಅಂಚಿನಲ್ಲೇ ಇರುವ ಪೆಟ್ರೋಲ್ ಪಂಪ್ ಮುಂಭಾಗ ನಿಂತಿತ್ತು. ಕೂಡಲೇ ಪಂಪ್ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಈ ಮೂಲಕ ಸಂಭಾವ್ಯ ಅಪಾಯ ತಪ್ಪಿದಂತಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ರಸ್ತೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.