ಉಡುಪಿ, ನ.19(DaijiworldNews/AA): ಉಡುಪಿಯ ಕೃಷ್ಣ ಮಠದ ರಥಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆ ಹಾಗೂ ಆಕೆಯ ಇಬ್ಬರು ಮೊಮ್ಮಕ್ಕಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿದ್ದಾರೆ.
ಬಾಗಲಕೋಟೆ ಮೂಲದ ಪಕೀರವ್ವ (75) ಅವರು ತಮ್ಮ ಇಬ್ಬರು ಮೊಮ್ಮಕ್ಕಳೊಂದಿಗೆ ಒಂದು ವರ್ಷದಿಂದ ಮನೆಗೆ ಬಾರದೆ ಕಾಣೆಯಾಗಿದ್ದ ಮಗನನ್ನು ಹುಡುಕಿಕೊಂಡು ಬಾಗಲಕೋಟೆಯಿಂದ ಉಡುಪಿಗೆ ಆಗಮಿಸಿದ್ದರು.
ವೃದ್ಧೆಗೆ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಲಾಗಿದೆ. ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಅನುಸಾರ ಮೊಮ್ಮಗ ಹನುಮಂತ (10)ನಿಗೆ ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ತುರ್ತು ಆಶ್ರಯ ನೀಡಲಾಗಿದೆ. ಮತ್ತು ಮೊಮ್ಮಗಳಾದ ಪ್ರೇಮ (16)ಗೆ ನಿಟ್ಟೂರು ಬಾಲಕೀಯರ ಬಾಲ ಭವನದಲ್ಲಿ ಆಶ್ರಯ ನೀಡಲಾಗಿದೆ.