ಮಂಗಳೂರು,ಜೂ 05 (Daijiworld News/MSP): ಕೇರಳದ ವಿದ್ಯಾರ್ಥಿಯೊಬ್ಬರಲ್ಲಿ ನಿಫಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲೂ ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳಲಾಗಿದೆ. ಕೇರಳ ರಾಜ್ಯದಿಂದ ಮಂಗಳೂರು ನಗರಕ್ಕೆ ಜನ ಸಂಚರಿಸುತ್ತಿರುತ್ತಾರೆ. ಮಾತ್ರವಲ್ಲದೆ ಕೇರಳದಿಂದ ರೋಗಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಗರದ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಹಾಗಾಗಿ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.
ಶಂಕಿತ ನಿಫಾ ವೈರಸ್ ಲಕ್ಷಣ ಗಳು ಕಂಡುಬಂದರೆ ತತ್ಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲೆಯ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.
ಕೇರಳ ರಾಜ್ಯದಿಂದ ಮಂಗಳೂರಿಗೆ ಹೆಚ್ಚಿನ ಜನ ರೈಲಿನಲ್ಲಿ ಆಗಮಿಸುತ್ತಾರೆ. ಹಾಗಾಗಿ ರೈಲ್ವೇ ವೈದ್ಯರು ಈ ಬಗ್ಗೆ ಗಮನಹರಿಸುತ್ತಿರಬೇಕು. ಜ್ವರ ಅಥವಾ ಇತರ ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಕಂಡಬಂದರೆ ಸೂಕ್ತ ತಪಾಸಣೆ ನಡೆಸಬೇಕು. ಸಿಬಂದಿ ಕೊರತೆ ಇದ್ದಲ್ಲಿ ರೋಗಿಗಳನ್ನು ವೆನ್ಲಾಕ್ಗೂ ಶಿಫಾರಸು ಮಾಡಬಹುದು ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ| ಪ್ರವೀಣ್ ತಿಳಿಸಿದ್ದಾರೆ.