ವಿಟ್ಲ, ಜೂ 05(Daijiworld News/SM): ವಿಟ್ಲದ ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ಪಡಾರು ಜಂಕ್ಷನ್ ನಲ್ಲಿ ಕೆ.ಎಂ.ಎಫ್. ಫೀಡ್ ಸಾಗಾಟ ಮಾಡುತ್ತಿದ್ದ ಲಾರಿಯ ಕ್ಲೀನರ್ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸಿಂಗಟೆಗೆರೆ ನಿವಾಸಿ ದುಶ್ಯಾಂತ್ ಮೃತ ದುರ್ದೈವಿ. ಮಾದಕಟ್ಟೆ ಹಾಲು ಶೇಕರಣಾ ಘಟಕಕ್ಕೆ ಕೆ.ಎಂ.ಎಫ್. ಫೀಡ್ ತಂದು ಅಲ್ಲಿ ಬ್ಯಾಗನ್ನು ಅನ್ಲೋಡ್ ಮಾಡಿ ಬಳಿಕ ಪುಣಚಕ್ಕೆ ತೆರಳುವ ಸಲುವಾಗಿ ಪಡಾರು ಜಂಕ್ಷನ್ ನಲ್ಲಿ ಲಾರಿಯನ್ನು ನಿಲ್ಲಿಸಿದ್ದ.
ಈ ವೇಳೆ ಕ್ಲೀನರ್ ದುಶ್ಯಾಂತ್ ರವರು ಲಾರಿಯ ಕ್ಯಾಬಿನ್ ಮೇಲಿದ್ದ ಅವರ ಶರ್ಟ್ ತೆಗೆಯಲು ಹತ್ತಿದ ವೇಳೆ ಮೇಲ್ಬಾಗದಲ್ಲಿ ಹಾದು ಹೋದ ವಿದ್ಯುತ್ ತಂತಿ ಅವರಿಗೆ ತಗುಲಿದೆ. ವಿದ್ಯುತ್ ಶಾಕ್ ನಿಂದ ಕೆಳೆಕ್ಕೆಸೆಯಲ್ಪಟ್ಟ ದುಶ್ಯಾಂತ್ ರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.