ಮಂಗಳೂರು, ನ.26(DaijiworldNews/AA): ನಂತೂರು ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿಯು ಇಂದು ಮಂಗಳೂರಿನ ಕೂಳೂರು ಸೇತುವೆ ಕಾಮಗಾರಿ ಪ್ರದೇಶದಲ್ಲಿ ಧರಣಿ ನಡೆಸಿತು.
ಧರಣಿಯಲ್ಲಿ ಹೋರಾಟ ಸಮಿತಿ ಮುಖಂಡ ಮುನೀರ್ ಕಾಟ್ಟಿಪಳ್ಳ ಅವರು, ಮಂಗಳೂರು ಪೊಲೀಸ್ ಆಯುಕ್ತರ ವಿರುದ್ಧ ಹಾಗೂ ಸ್ಥಳೀಯ ಶಾಸಕ ಭರತ್ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡದಿಂದ ಅನೇಕರು ಪ್ರಾಣಕಳೆದು ಕೊಂಡಿದ್ದಾರೆ. ನಾಲ್ಕು ವರ್ಷಗಳಿಂದ ಸೇತುವೆ ಕಾಮಗಾರಿ ಮಾಡ್ತಾ ಇದ್ರು ಸಂಪೂರ್ಣ ಆಗಿಲ್ಲ. ನಂತೂರಿನಲ್ಲಿ ಮೇಲ್ಸೇತುವೆ ಕಾಮಗಾರಿ ಕಾಲಮಿತಿಯಲ್ಲಿ ಮಾಡಲಿ ಎಂದು ಹೇಳಿದರು.
ಮೇಲ್ಸೇತುವೆ ಕಾಮಗಾರಿ ಬಗ್ಗೆ ಹೋರಾಟಕ್ಕೆ ಅನುಮತಿ ಕೇಳಿದ್ರೆ ಅನುಮತಿ ನಿರಾಕರಣೆ ಮಾಡ್ತಾರೆ. ಹೋರಾಟಕ್ಕೆ ಹೆದ್ದಾರಿ ಇಲಾಖೆಯಿಂದ ಅನುಮತಿ ಪಡೆಯಲು ಹೇಳ್ತಾರೆ. ಮಂಗಳೂರಿನಲ್ಲಿ ನಿಗದಿ ಪಡಿಸಿದ ಸ್ಥಳದಲ್ಲಿ ಹೋರಾಟ ಮಾಡಲು ಹೇಳ್ತಾರೆ. ಮಂಗಳೂರು ಆಯುಕ್ತರು ಪೊಲೀಸ್ ರಾಜ್ಯ ಮಾಡಲು ಹೊರಟ್ಟಿದ್ದಾರೆ. ಬಿಜೆಪಿಯವರಿಗೆ ಬೇಜಾರು ಆಗುವ ಯಾವುದೇ ಕಾರ್ಯಕ್ರಮಕ್ಕೂ ಅವಕಾಶ ಕೊಡ್ತಾ ಇಲ್ಲ. ಉತ್ತರದ ಶಾಸಕರು ಸುರತ್ಕಲ್ ನಲ್ಲಿ ಎರಡು ದಿನ ರಸ್ತೆ ಬಂದ್ ಮಾಡಿ ಕಾರ್ಯಕ್ರಮ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಿಲ್ಲ. ಅದನ್ನು ಇಲಾಖೆ ತಡೆಯುವ ಪ್ರಯತ್ನನೂ ಮಾಡಿಲ್ಲ ನೋಟಿಸ್ ನೀಡಿಲ್ಲ ಎಂದರು.
ಕೊಣಾಜೆಯಲ್ಲಿ ಎಬಿವಿಪಿ ಹಿಂಸಾಚಾರ ಪ್ರತಿಭಟನೆ ಮಾಡಿದ್ದಾರೆ. ಅಂತಹದಕ್ಕೆ ಇವ್ರು ಅನುಮತಿ ಕೊಡ್ತಾರೆ ಆದ್ರೆ ಶಾಸಕರು ಸಂಸದರು ತಮ್ಮ ಜವಾಬ್ದಾರಿ ನೆನಪಿಸಿ ಹೋರಟ ಮಾಡ್ತೆ ಹೇಳಿದ್ರೆ ಅನುಮತಿ ನೀಡಲ್ಲ. ಮಂಗಳೂರಿನಲ್ಲಿ ಇಸ್ಪಿಟ್ ದಂಧೆ, ಜೂಜೂ, ವೆಶ್ಯಾವಾಟಿಕೆ, ಮರಳು ದಂಧೆ ನಡೆಯುತ್ತಿದೆ. ಅದನ್ನು ನೀವು ನಿಗಧಿ ಪಡಿಸಿದ ಜಾಗದಲ್ಲೇ ಎಲ್ಲರಿಗೂ ಕಾಣುವಂತೆ ಮಾಡಲಿ. ನಗರದ ಮಿನಿ ವಿಧಾನ ಸೌಧದ ಮುಂದೆ ಅದನ್ನು ದಂಧೆಗಳಿಗೂ ಟೆಂಟ್ ಹಾಕಿ ಕೊಡಲಿ. ನಮ್ಮ ಪ್ರತಿಭಟನೆಗೆ ಅವಕಾಶ ನೀಡಿಲ್ಲ ತಾಕತ್ತು ಇದ್ದರೆ ಬಂದು ನಮ್ಮನ್ನು ಬಂಧಿಸಲಿ. ಕಳ್ಳರಂತೆ ಮತ್ತೆ ಎಫ್ಐಆರ್ ಮಾಡೋದಲ್ಲ. ಮುಂದಿನ ದಿನಗಳಲ್ಲಿ ನಗರದಲ್ಲಿ ಕಮಿಷನರ್ ಕಚೇರಿ ಚಲೋ ಹೋರಾಟ ಮಾಡಲಿದ್ದೇವೆ. ಕಮಿಷನರ್ ಅನುಪಮ ಅಗರ್ವಾಲ್ ಹಠಾವೋ ಹಮ್ಮಿಕೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.