ಮಂಗಳೂರು,ನ.27(DaijiworldNews/TA):ನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆ, ಕೊಟ್ಟಾರ ಚೌಕಿ ಮಂಗಳೂರು, ಇಲ್ಲಿನ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಂಡಿದ್ಧರು.
ನಾರಾಯಣಗುರು ಸರ್ಕಲ್, ಲೇಡಿಹಿಲ್ ಹಾಗೂ ಬಿಜೈ ಸರ್ಕಲ್ ಮಂಗಳೂರು ಇಲ್ಲಿ ಶ್ರೀ ಚೈತನ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಜಾಥಾ ಹಾಗೂ ಬೀದಿ ನಾಟಕ ನಡೆಸಿ ರಸ್ತೆಗಳಲ್ಲಿ ವಾಹನ ಸಂಚಾರರಿಗೆ ಮತ್ತು ಪಾದಚಾರಿಗಳಿಗೆ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.
ಈ ವಿದ್ಯಾಸಂಸ್ಥೆಯು ಸತತ 8 ವರ್ಷಗಳಿಂದ ರಸ್ತೆ ಸುರಕ್ಷತೆಗಾಗಿ ಜಾಥಾ ನಡೆಸಿ ಜನಸಾಮಾನ್ಯರಲ್ಲಿ ಜಾಗ್ರತೆ ಮೂಡಿಸುತ್ತಿದೆ.ಶಾಲೆಯ ಆಡಳಿತ ಅಧಿಕಾರಿ ಕೆ. ಸುನಿಲ್ ಕುಮಾರ್, ಶಾಲಾ ಪ್ರಾಂಶುಪಾಲರಾದ ಶ್ರೀಮತಿ ವಿನುತಾ ಕಾಮತ್ ಹಾಗೂ ರಸ್ತೆ ಸಂಚಾರಿ ವಿಭಾಗದ ಮುಖ್ಯಸ್ಥರು ಹಾಗೂ ಉರ್ವ ಮತ್ತು ಕದ್ರಿ ಪೊಲೀಸ್ ಠಾಣಾ ಸಿಬ್ಬಂದಿಗಳು ಶಾಲಾ ಸಿಬ್ಬಂದಿಗಳು ಪಾಲ್ಗೊಂಡು ಯಶಸ್ವಿಗೊಳಿಸಿದರು.