ಮಂಗಳೂರು, ,ನ.28(DaijiworldNews/AK): ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ವರ್ಗಾವಣೆಗೆಗೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಸದಸ್ಯರು ರಾವ್ ಮತ್ತು ರಾವ್ ವೃತ್ತದಲ್ಲಿ ಗುರುವಾರ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ನವೆಂಬರ್ 27 ರಂದು ಕುಳೂರಿನಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಹಿನ್ನಲೆ ಈ ಪ್ರತಿಭಟನೆ ನಡೆಸಲಾಯಿತು, ಅಲ್ಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಪ್ರತಿಭಟನೆ ವೇಳೆ ಪೊಲೀಸ್ ಕಮಿಷನರ್ ವಿರುದ್ಧ ಘೋಷಣೆಗಳು ಮೊಳಗಿದವು. ಪ್ರತಿಭಟನಾಕಾರರು ರಸ್ತೆ ತಡೆಗೆ ಯತ್ನಿಸಿದರು, ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರನ್ನು ಬಂಧಿಸಿದರು. ಪ್ರತಿಭಟನೆ ಬಳಿಕ ವಾಹನ ಸಂಚಾರವನ್ನು ಕೂಡಲೇ ತೆರವುಗೊಳಿಸಲಾಯಿತು.
ಏತನ್ಮಧ್ಯೆ, ಪ್ರತಿಭಟನೆಯ ವೇಳೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಮುತ್ತಪ್ಪ ಅವರಿಗೆ ಗಾಯಗಳಾಗಿದ್ದು, ಅವರನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.