ಬಂಟ್ವಾಳ, ಡಿ 1: ಬಂಟ್ವಾಳ ಪುರಸಭೆಯ ವ್ಯಾಪ್ತಿಯ ಸ್ವಚ್ಛತೆಗಾಗಿ ಸ್ವಚ್ಛ ಸರ್ವೇಕ್ಷಣೆ 2015 ಗೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಲಾಗಿದೆ.
ಸಾರ್ವಜನಿಕರು ಸ್ವಚ್ಛತೆಗೆ ಕುರಿತಾದ ಮಾಹಿತಿ, ಸಮಸ್ಯೆ ಕುರಿತಾಗಿ ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ. ಸಮಿತಿಯು ಸ್ವಚ್ಛ ಸರ್ವೇಕ್ಷಣೆಯ ಅಂಶಗಳ ಕುರಿತು ವಿಮರ್ಶೆ, ಚರ್ಚೆ ಹಾಗೂ ಅಗತ್ಯ ಮಾರ್ಗದರ್ಶನವನ್ನು ಪೌರಕಾರ್ಮಿಕರಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ಸಮಾಜದ ಎಲ್ಲಾ ನಾಗರಿಕರಿಗೆ ನೀಡುವ ಕಾರ್ಯನಿರ್ವಹಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ದೂರವಾಣಿ ಸಂಖ್ಯೆ 9845167837, ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು9885301854 ಮತ್ತು ಹಿರಿಯ ಆರೋಗ್ಯ ನಿರೀಕ್ಷಕರು ರತ್ನಪ್ರಸಾದ್ ಪಿ. 9448147697 ಹಾಗೂ ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದು.
ಅಲ್ಲದೆ, ಸ್ವಚ್ಛ ಸರ್ವೇಕ್ಷಣೆ 2018 ರಲ್ಲಿ ಭಾಗವಹಿಸಿ, ನಿಮ್ಮ ನಗರದ ಸ್ವಚ್ಛತೆಯ ಕುರಿತು ತಿಳಿಸಲು ದೂರವಾಣಿ ಸಂಖ್ಯೆ 18006272777 ಕ್ಕೆ ಮಿಸ್ಡ್ ಕಾಲ್ ನೀಡಿ ಎಂದು ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.