ಬಂಟ್ವಾಳ, ಜೂ 06 (Daijiworld News/SM): ಸಿಡಿಲು ಬಡಿದು ಮೂರು ತೆಂಗಿನ ಮರ ಸುಟ್ಟು ಮನೆ ಗೊಡೆ ಬಿರುಕು ಬಿಟ್ಟ ಘಟನೆ ಬಂಟ್ವಾಳದ ಸಜೀಪ ಮುನ್ನೂರು ಅಲಾಡಿ ಎಂಬಲ್ಲಿ ನಡೆದಿದೆ.
ಬುಧವಾರ ರಾತ್ರಿ ಸುರಿದ ಬಾರಿ ಮಳೆ ಹಾಗೂ ಸಿಡಿಲಿನ ಅಬ್ಬರಕ್ಕೆ ಸಜೀಪ ಮುನ್ನೂರು ಗ್ರಾಮದ ಅಲಾಡಿ ನಿವಾಸಿ ರುಕ್ಮುಯ ಪೂಜಾರಿ ಅವರ ಮನೆಯ ಪಕ್ಕದಲ್ಲಿದ್ದ ಮೂರು ತೆಂಗಿನ ಮರಗಳು ಸುಟ್ಟು ಹೋಗಿವೆ, ಮನೆಯೊಳಗೆ ಗೋಡೆ ಬಿರುಕು ಬಿಟ್ಟಿದೆ.
ಇನ್ನು ಸಿಡಿಲು ಬಡಿತದಿಂದಾಗಿಮನೆಯ ವಿದ್ಯುತ್ ವಯರ್ ಗಳು ಸಂಪೂರ್ಣ ವಾಗಿ ಕೆಟ್ಟು ಹೋಗಿವೆ. ಸ್ವಿಚ್ ಬೋರ್ಡುಗಳು ಸುಟ್ಟು ಹೋಗಿವೆ. ಮನೆಯವರಿಗೆ ಯಾವುದೇ ರೀತಿಯ ಅಪಾಯಗಳು ಸಂಭವಿಸಿಲ್ಲ.
ಇನ್ನು ಮನೆ ಮಂದಿ ಘಟನೆಯ ಬಗ್ಗೆ ಸ್ಥಳೀಯ ಗ್ರಾ.ಪಂಚಾಯತ್ ಗೆ ಮಾಹಿತಿ ನೀಡಿದ್ದಾರೆ.