ಹೊಸದಿಲ್ಲಿ, ಡಿ 1: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಜೊತೆ ತಾವು ಇಟ್ಟುಕೊಂಡಿದ್ದ ಸಂಬಂಧದ ಬಗ್ಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಿಲ್ಲಿಯಲ್ಲಿ ಮಾತನಾಡಿದ್ದಾರೆ.
ದೇಶದ ಅಭಿವೃದ್ಧಿ ಬಗ್ಗೆ ಮೋದಿಗೆ ದೂರದೃಷ್ಟಿ ಇದೆ. ಆಡಳಿತವನ್ನು ಆಧುನೀಕರಣಗೊಳಿಸಲು ಮೋದಿ ಅವರು ಶ್ರಮಿಸುತ್ತಿದ್ದಾರೆ ಎಂದು ಬರಾಕ್ ಹೇಳಿದ್ದಾರೆ.
ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೂ ನನಗೆ ಉತ್ತಮ ಗೆಳೆಯ. 2009 ರಲ್ಲಿ ಸಂಭವಿಸಿದ ವಿತ್ತೀಯ ಸಂಕಷ್ಟವನ್ನು ಸರಿದೂಗಿಸಲು ಕೇಂಬ್ರಿಡ್ಜ್ ವಿವಿಯಲ್ಲಿ ಅಧ್ಯಯನ ಮಾಡಿದ ಮನಮೋಹನ್ ಸಿಂಗ್ ತೆಗೆದುಕೊಂಡ ದಿಟ್ಟ ಕ್ರಮಗಳು ಪ್ರಶಂಸನೀಯ ಎಂದರು.
ಮನಮೋಹನ್ ಸಿಂಗ್ ಬುದ್ಧೀವಂತ ಮತ್ತು ಅದ್ಬುತ ವ್ಯಕ್ತಿ ಎಂದೂ ಕೆಲವು ವರ್ಷಗಳ ಹಿಂದೆ ಸಿಂಗ್ಗೆ ಒಬಾಮಾ ಹೇಳಿದ್ದರು.