ಮಂಗಳೂರು,ಡಿ.05 (DaijiworldNews/TA): ಕಳೆದ 28 ವರ್ಷಗಳಿಂದ ಮಂಗಳೂರಿನಲ್ಲಿ ಅತ್ಯ್ಶಾಧುನಿಕ ಮತ್ತು ಗುಣ ಮಟ್ಟದ ಸೇವೆ ನೀಡುತ್ತಿರುವ ಚೇತನಾಸ್ ಬ್ಯೂಟಿ ಲೌಂಜ್ ಹಾಗೂ ಎಜ್ಯುಕೇಶನ್ ಫೌಂಡೇಶನ್ ಇದರ ಪದವಿ ಪ್ರದಾನ ಮತ್ತು 28 ವರ್ಷಗಳ ಶ್ರೇಷ್ಠತೆಯ ಸಂಭ್ರಮಾಚರಣೆ ಕಾರ್ಯಕ್ರಮ ಮಂಗಳೂರಿನ ಪಿವಿಎಸ್ ಬಳಿಯ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನೆರವೇರಿತು.

























https://daijiworld.ap-south-1.linodeobjects.com/Linode/images3/daya_041224_chetn25.JPG>













ಕಾರ್ಯಕ್ರಮವನ್ನು ದಾಯ್ಜಿ ವರ್ಲ್ಡ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಭಾರತ ಸರ್ಕಾರದ MSME ಸಚಿವಾಲಯದ ಅಭಿವೃದ್ಧಿ ಸಂಸ್ಥೆಯ ಹೆಚ್ಚುವರಿ ನಿರ್ದೇಶಕಿ ಶ್ರುತಿ ಜಿ ಕೆ ಇತರೆ ಗಣ್ಯರು ಸೇರಿ ದೀಪ ಪ್ರಜ್ವಲಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಈ ವೇಳೆ ದಾಯ್ಜಿ ವರ್ಲ್ಡ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಮಾತನಾಡಿ ಚೇತನಾಸ್ ಬ್ಯೂಟಿ ಲೌಂಜ್ ಮುಖ್ಯಸ್ಥೆ ಚೇತನ ಎಸ್ ಅವ್ರು ತುಳುನಾಡಿನ ಹೆಮ್ಮೆಯ ಮಹಿಳಾ ಉದ್ಯಮಿ ಯಾಕೆಂದರೆ ಕಳೆದ 28 ವರ್ಷಗಳಿಂದ ಈ ಕ್ಷೇತ್ರದಲ್ಲಿ ಅವಿರತ ಸೇವೆ ನೀಡುತ್ತಿರುವ, ಅದೆಷ್ಟೋ ಮಹಿಳೆಯರಿಗೆ ಉದ್ಯೋಗ ಮತ್ತು ಸ್ವ ಉದ್ಯಮ ಕಲ್ಪಿಸಿದ ದೀಮಂತ ಮಹಿಳ ಉದ್ಯಮಿ ಮತ್ತು ಮಹಿಳ ಸಬಲೀಕರಣಕ್ಕೆ ಇವರೆ ಜ್ವಲಂತ ಉದಾಹರಣೆಯಾಗಿದ್ದರೆ, ಇವ್ರು ಈ ಸೇವೆ ಇನ್ನಷ್ಟು ಮಹಿಳೆಯರಿಗೆ ಸ್ಫೂರ್ತಿ ಮತ್ತು ಮಾದರಿಯಾಗಲಿ ಎಂದವರು ಶುಭ ಹಾರೈಸಿದರು.
ಇನ್ನು ಕಳೆದ 28 ವರ್ಷಗಳ ಚೇತನಾಸ್ ಬ್ಯೂಟಿ ಲೌಂಜ್ ನ ಅಮೋಘ ಸಾಧನೆಯನ್ನು ಗುರುತಿಸಿ, ಯುನೈಟೆಡ್ ಕಿಂಗ್ಡಮ್ ನ ಲಂಡನ್ ಅಕಾಡೆಮಿ ಆಫ್ ಪ್ರೊಫೆಷನಲ್ ಟ್ರೈನಿಂಗ್ ವತಿಯಿಂದ ಚೇತನಾಸ್ ಬ್ಯೂಟಿ ಲೌಂಜ್ ಮುಖ್ಯಸ್ಥೆ ಚೇತನಾ ಎಸ್. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಂಡನ್ ಅಕಾಡೆಮಿ ಆಫ್ ಪ್ರೊಫೆಷನಲ್ ಟ್ರೈನಿಂಗ್ ಸುಮಾರು 180ಕ್ಕೂ ಅಧಿಕ ದೇಶಗಳಲ್ಲಿ ಗುರುತಿಸಲ್ಪಟ್ಟ ಜಾಗತಿಕ ಪ್ರಮಾಣೀಕರಣವನ್ನು ನೀಡುತ್ತಿರುವ ಏಕೈಕ ಸಂಸ್ಥೆಯಾಗಿದೆ.
ಇನ್ನು ನೂತನ ಪ್ರಮಾಣೀಕರಣದ ಅಡಿಯಲ್ಲಿ 2025 ರ ಜನವರಿಯಿಂದ ಮೊದಲ ಬ್ಯಾಚ್ ಆರಂಭವಾಗುತ್ತಿದ್ದು, ಹೊಸ ಶೈಲಿಯನ್ನು ಸೌಂದರ್ಯ ಆರಾಧಕರಿಗೆ ಪರಿಚಯಿಸುತ್ತಿದೆ. ಇನ್ನು ಕಾರ್ಯಕ್ರಮದಲ್ಲಿ ಲಂಡನ್ ಅಕಾಡೆಮಿ ಆಫ್ ಪ್ರೊಫೆಷನಲ್ ಟ್ರೈನಿಂಗ್ ನ ಭಾರತೀಯ ವಲಯದ ಅಧ್ಯಕ್ಷರಾದ ವಿಜಯ್ ಅವರು ಪಾಲ್ಗೊಂಡು, ಶುಭ ಹಾರೈಸಿದರು.
ಚೇತನಾಸ್ ಬ್ಯೂಟಿ ಲೌಂಜ್ ಹಲವು ವರ್ಷಗಳಿಂದ ಸೇವೆ ನೀಡುತ್ತಿದ್ದು, ಸಂಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸೌಂದರ್ಯ ವರ್ಧಕಗಳ ಬಳಕೆ ಮತ್ತು ವಿವಿಧ ಕೋರ್ಸ್ ನಡೆಸುತ್ತಿದೆ. ಮೇಕಪ್ ಮತ್ತು ಕೂದಲು, ವಿಭಿನ್ನ ಮೇಕ್ಅಪ್, ಸ್ವಯಂ ಅಂದಗೊಳಿಸುವಿಕೆ, ಕೈ ಮೆಹೆಂದಿ, ಸ್ಕಿನ್ ಕೋರ್ಸ್, ಬ್ಯೂಟಿ ಪಾರ್ಲರ್ ಕೋರ್ಸ್ ಮತ್ತು ಹೆಚ್ಚಿನ ಕೋರ್ಸ್ ಗಳು ಇಲ್ಲಿ ಲಭ್ಯವಿದ್ದು, ಸೌಂದರ್ಯ ಅಕಾಡೆಮಿ ಮಾನ್ಯತೆ ಮತ್ತು ಪ್ರಶಸ್ತಿ ಪಡೆದ ಮಂಗಳೂರಿನ ಏಕೈಕ ಬ್ಯೂಟಿ ಲೌಂಜ್ ಇದಾಗಿದೆ.