ಮಂಗಳೂರು,ಡಿ.05 (DaijiworldNews/TA): ದ.ಕ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ದ.ಕ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ, ಸಂತ ಅರ್ಸುಲ ಅಂಗನವಾಡಿ ಕೇಂದ್ರ ಪಠೇಲ್ ಕಾಂಪೌಂಡ್ ಅತ್ತಾವರ ಗ್ರಾಮ 45 ನೇ ಪೋರ್ಟ್ ವಾರ್ಡ್ ಇದರ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನಾ ಸಮಾರಂಭ ನೆರವೇರಿತು.




ಕಾರ್ಯಕ್ರಮಕ್ಕೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ,ಮನಪಾ ಸದಸ್ಯ ಮನೋಜ್ ಕುಮಾರ್, ಮಂಗಳೂರು ೪೫ ನೇ ಪೋರ್ಟ್ ವಾರ್ಡ್ ಕಾರ್ಪೋರೇಟರ್ ಅಬ್ದುಲ್ ಲತೀಫ್, ಇತರ ಗಣ್ಯರು ಸೇರಿ ಚಾಲನೆ ನೀಡಿದರು. ಈ ವೇಳೆ ಕೇಂದ್ರಕ್ಕೆ ಬೇಕಾಗಿ ಶ್ರಮಿಸಿದವರಿಗೆ ಗೌರವ ಸನ್ಮಾನ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತ ಎನ್, ರೊಸಾರಿಯೊ ಚರ್ಚ್ ಧರ್ಮಗುರು ಫಾ. ಆಲ್ಫೆಡ್ ಜೆ. ಪಿಂಟೊ, ಸಂತ ಅರ್ಸುಲ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಸೆಲಿನ್ ಡೇಸಾ, ಶ್ರೀ ದೈವರಾಜ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ್ ಗಂಗಾಧರ್, ಪೂನಿಯ ಟೆಂಟ್ ಆ್ಯಂಡ್ ಕ್ಲೋತ್ಸ್ ಮಾಲಕರಾದ ರಾಜೇಶ್ ಪೂನಿಯ, ಅಂಗನವಾಡಿ ಕೇಂದ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಶೆಟ್ಟಿ, ಬಾಲ ವಿಕಾಸ ಸಮಿತಿ ಸಂತ ಅರ್ಸುಲ ಅಂಗನವಾಡಿ ಕೇಂದ್ರದ ಅಧ್ಯಕ್ಷೆ ಕವಿತಾ, ಶ್ರೇಯಸ್ ಪಿ ಆರ್, ವಿಶಾಲಾಕ್ಷಿ ಪಲಣೀರು, ಶುಜಾತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.