ಮಂಗಳೂರು, ಡಿ.05(DaijiworldNews/AA): ಹಿಮಾಲಯದ ಲಡಾಕ್ನ ದ್ರಾಸ್ ಪ್ರದೇಶದಲ್ಲಿರುವ 'ಮಚೋಯ್' ಪರ್ವತವನ್ನು ಏರುವ ಮೂಲಕ ಸುರತ್ಕಲ್ನ ಸುಹಾನ್ ಸುಧಾಕರ್ ಅವರು ಸಾಧನೆ ಮಾಡಿದ್ದಾರೆ.

ಸುಹಾನ್ ಅವರು ಮೂಡಿಗೆರೆಯಲ್ಲಿರುವ ಬೌಲೈನ್ ಸ್ಫೋರ್ಟ್ಸ್ ಆ್ಯಂಡ್ ಅಡ್ವೆಂಚರ್ನ ಸಂಸ್ಥಾಪಕರಾಗಿದ್ದಾರೆ. 'ಮಚೋಯ್' ಪರ್ವತವು 16,863 ಅಡಿ ಎತ್ತರದಲ್ಲಿದ್ದು, ಅಮರನಾಥ ಗುಹೆ ಹಾಗೂ ಜೊಜಿಲಾ ನಡುವೆ ಇದೆ. ಈ ಪರ್ವತದಲ್ಲಿ ಆಮ್ಲಜನಕ ಮಟ್ಟವು ಗಣನೀಯವಾಗಿ ಕಡಿಮೆ ಇದೆ. ಈ ಪರ್ವತವನ್ನು ಪರ್ವತಾರೋಹಿಗಳಿಗೆ ಅಪಾಯಕಾರಿ ಹಾಗೂ ಬಹಳಷ್ಟು ಸವಾಲಿನ ಪರ್ವತವೆಂದೇ ಪರಿಗಣಿಸಲಾಗಿದೆ.
42 ಮಂದಿಯ ಪರ್ವತಾರೋಹಿಗಳ ತಂಡ 'ಮಚೋಯ್' ಪರ್ವತವನ್ನು ಏರುವ ಪ್ರಯತ್ನ ನಡೆಸಿತ್ತು. ಈ ತಂಡದಲ್ಲಿದ್ದ 42 ಮಂದಿಯ ಪೈಕಿ ಕರ್ನಾಟಕದಿಂದ ಸುಹಾನ್ ಸುಧಾಕರ್ ಮಾತ್ರ ಭಾಗವಹಿಸಿದ್ದರು.