ಉಡುಪಿ,ಡಿ.05 (DaijiworldNews/TA): ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯ 5 ನೇ ತರಗತಿಯಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳ ವಾರ್ಷಿಕೋತ್ಸವ 'ಉತ್ಸವ 2024' ರ ಅದ್ಧೂರಿಯಾಗಿ ಆಚರಿಸಿತು. ಮುಖ್ಯ ಅತಿಥಿ, ಉಡುಪಿ ಧರ್ಮಪ್ರಾಂತ್ಯದ ಶಿಕ್ಷಣ ಮಂಡಳಿಯ ಆಡಳಿತ ಮಂಡಳಿಯ ಸದಸ್ಯ ಪ್ರೊ.ಪಿ ಆರ್ಚಿಬಾಲ್ಡ್ ಫರ್ಟಾಡೊ ಅವರು ಮಾತನಾಡಿದರು.


ನಾನು ಇಲ್ಲಿಗೆ ಬಂದಿರುವುದಕ್ಕೆ ನಿಜವಾಗಿಯೂ ಗೌರವ ಮತ್ತು ಸಂತೋಷವಾಗಿದೆ. ಇಷ್ಟು ದೊಡ್ಡ ಪ್ರೇಕ್ಷಕರು ಮತ್ತು ಯುವ ಮನಸ್ಸುಗಳಿಗೆ ಅವರ ಬೆಂಬಲವನ್ನು ನೋಡುವುದು ಸ್ಫೂರ್ತಿದಾಯಕ. ಯುವ ಮನಸ್ಸುಗಳು ತಮ್ಮ ಪ್ರತಿಭೆ ಪ್ರದರ್ಶಿಸಿದಂತೆಯೇ ನಿಮ್ಮ ಪ್ರತಿಭೆಯನ್ನು ವೀಕ್ಷಿಸಲು ನಾವು ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ತಿಳಿಸಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನ್ಸಿಲ್ಲಾ ರೋಶನಿ ಡಿ'ಮೆಲ್ಲೋ ವಾರ್ಷಿಕ ಶಾಲಾ ವರದಿ ಮಂಡಿಸಿದರು. ಅತಿಥಿ ಪ್ರೊ.ಪಿ ಆರ್ಚಿಬಾಲ್ಡ್ ಫುರ್ಟಾಡೊ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
2023-2024 ನೇ ಸಾಲಿನ ಎಸ್ಎಸ್ಎಲ್ಸಿ ಟಾಪರ್ ಗಳು ಮತ್ತು ಡಿಸ್ಟಿಂಕ್ಷನ್ ಪಡೆದವರಿಗೆ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವು 5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳ ವಿವಿಧ ನೃತ್ಯ, ನಾಟಕ ಮತ್ತು ಮನೋರಂಜನಾ ಪ್ರದರ್ಶನಗಳನ್ನು ಒಳಗೊಂಡಿತ್ತು, ಶಾಲಾ ಸಂಚಾಲಕ ಫಾದರ್ ಡಾ ರೋಕ್ ಡಿಸೋಜಾ ಅವರು ಸ್ವಾಗತಿಸಿದರು.
ಗೌರವ ಅತಿಥಿಗಳಾಗಿ ಮೌಂಟ್ ರೋಸರಿ ಚರ್ಚ್ ನ ಸಹಾಯಕ ಧರ್ಮಗುರು ಫಾದರ್ ಒಲಿವರ್ ನಜರೆತ್, ಗೊರಟ್ಟಿ ಕಾನ್ವೆಂಟ್ ನ ಸುಪೀರಿಯರ್ ಸಿಸ್ಟರ್ ಎಂ. ಜೇನ್ ಜೋಸೆಫ್, ಶಾಲಾ ಆಡಳಿತ ಮಂಡಳಿ ಸದಸ್ಯ ಲೂಕ್ ಡಿಸೋಜಾ, ಸದಸ್ಯ ಬ್ಯಾಪ್ಟಿಸ್ಟ್ ಡಯಾಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗರಾಜ ಎಲ್ ವಿ, ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಅನ್ಸಿಲ್ಲಾ ರೋಶನಿ ಡಿ'ಮೆಲ್ಲೋ, ಪೋಷಕರು, ವಿದ್ಯಾರ್ಥಿಗಳು ಮತ್ತು ಇತರರು ಉಪಸ್ಥಿತರಿದ್ದರು.