ಕಾಸರಗೋಡು,ಡಿ.05 (DaijiworldNews/TA): ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ಮರ ಬಿದ್ದು ಓರ್ವ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ಕಾಸರಗೋಡಿನ ಮಂಜೇಶ್ವರ ಸಮೀಪದ ಕಡಂಬಾರ್ ಇಡಿಯ ಎಂಬಲ್ಲಿ ನಡೆದಿದೆ. ಕಡಂಬಾರ್ ಗಾಂಧಿ ನಗರದ ಅಬ್ದುಲ್ ಸತ್ತಾರ್ (44) ಮೃತಪಟ್ಟವರು.

ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಲಿಲ್ಲ. ಇಡಿಯದ ವ್ಯಕ್ತಿಯೋರ್ವರ ಮನೆಯ ಹಿತ್ತಿಲಿನಲ್ಲಿ ಮರ ಕಡಿಯುತ್ತಿದ್ದಾಗ ಘಟನೆ ನಡೆದಿದೆ.
ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.